ದಿಲ್ಲಿ, ಸೆ. 15 :ಕೊರೊನಾ ಸಂಕಟದ ಹಿನ್ನೆಲೆಯಲ್ಲಿ ಎರಡು ವರ್ಷದ ಮಟ್ಟಿಗೆ ಸಂಸದರ ವೇತನದಲ್ಲಿ ಶೆ.30 ಕಡಿತವಾಗಲಿದೆ.
ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ್ದ ಸಂಸದರ ವೇತನ ಕಡಿತ ಮಸೂದೆಗೆ ಇಂದು ಅನುಮೋದನೆ ಸಿಕ್ಕಿದೆ.
ಕೊರೊನಾ ಕಾರಣದಿಂದ ದೇಶದ ಬೊಕ್ಕಸದ ಮೇಲೆ ತೀವ್ರ ಒತ್ತಡ ಇರುವ ಹಿನ್ನೆಲೆಯಲ್ಲಿ ಸಂಸದರ ವೇತನವನ್ನು ಶೇ. 30 ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಎಪ್ರಿಲ್‌ನಿಂದಲೇ ಸಂಸದರ ವೇತನ ಕಡಿತ ಶುರುವಾಗಿತ್ತು. ಕೊರೊನಾ ಪರಿಹಾರ ಕಾರ್ಯಗಳಿಗೆ ಹಣ ಹೊಂದಿಸುವ ಸಲುವಾಗಿ ಸುಗ್ರೀವಾಜ್ಞೆ ಮೂಲಕ ವೇತನ ಕಡಿತ ಜಾರಿಗೊಳಿಸಲಾಗಿತ್ತು.















