ಕೇರಳದಲ್ಲೊಂದು ಜಾರ್ಜ್‌ ಫ್ಲಾಯ್ಡ್‌ ಪ್ರಕರಣ

ತಿರುವನಂತಪುರ, ಸೆ. 15: ಅಮೆರಿಕದ ಮಿನ್ನೆಪೊಲಿಸ್‌ನಲ್ಲಿ  ಜಾರ್ಜ್‌ ಫ್ಲಾಯ್ಡ್‌ ಎಂಬ ಕರಿಯ ವ್ಯಕ್ತಿಯನ್ನು ಪೊಲೀಸರು ನೆಲಕ್ಕೆ ಒತ್ತಿ ಹಿಡಿದು ಸಾಯಿಸಿದ ಘಟನೆ ವಾರಗಟ್ಟಲೆ ತೀವ್ರ ಪ್ರತಿಭಟನೆಗೆ ಕಾರಣವಾದದ್ದು ಇನ್ನೂ ಮರೆತಿಲ್ಲ. ಇದೀಗ ಕೇರಳದಲ್ಲಿ ಭಾನುವಾರ ಇದೇ ರೀತಿಯ ಘಟನೆಯೊಂದು ಸಂಭವಿಸಿದ್ದು, ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಜನರು ಇದನ್ನು ಭಾರತದ ಜಾರ್ಜ್‌ ಫ್ಲಾಯ್ಡ್‌ ಘಟನೆ ಎನ್ನುತ್ತಿದ್ದಾರೆ.

ಚಿನ್ನ ಸ್ಮಗಲಿಂಗ್‌ ಪ್ರಕರಣದಲ್ಲಿ ಶಾಮೀಲಾಗಿರುವ ಉನ್ನತ ಶಿಕ್ಷಣ ಸಚಿವ ಕೆ.ಟಿಜಲೀಲ್‌ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರನ್ನು ಓರ್ವ ಪೊಲೀಸ್‌ ಸಿಬಂದಿ ನೆಲಕ್ಕೆ ಕೆಡವಿ ಒತ್ತಿ ಹಿಡಿದ ಚಿತ್ರವಿದು. ಈ ಪ್ರಕರಣದಲ್ಲಿ ಕಾಂಗ್ರಸ್‌ ಕಾರ್ಯಕರ್ತ ಸಸಾವಿಗೀಡಾಗಿಲ್ಲ. ಆದರೆ ಪೊಲೀಸರ ಈ ಅಮಾನವೀಯ ವರ್ತನೆಗೆ ವ್ಯಾಪಕ ಟೀಕೆ ಕೇಳಿ ಬಂದಿದೆ.









































































































error: Content is protected !!
Scroll to Top