ಕಾರ್ಕಳ, ಸೆ. 9: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾರ್ಕಳ ಮುಂಡ್ಲಿ ಇಲ್ಲಿನ ಆಂಗ್ಲ ಭಾಷಾ ಶಿಕ್ಷಕಿ ಬಹುಮುಖ ಪ್ರತಿಭಾವಂತೆಯಾಗಿರುವ ಪ್ರತಿಭಾ ಅವರನ್ನು ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ರೋಟರಿ ಕ್ಲಬ್ ಕಾರ್ಕಳ,ರಾಕ್ ಸಿಟಿ ಕಾರ್ಕಳ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ವತಿಯಿಂದ ಸೆ.8 ರಂದು ಸನ್ಮಾನಿಸಲಾಯಿತು.
ಶಾಲೆಯಲ್ಲಿ ಬಾಟಲ್ ಗಾರ್ಡನ್, ವರ್ಲಿ ಆರ್ಟ್ ಮತ್ತು ಸ್ಟೋನ್ ಆರ್ಟ್ಗಳ ಮೂಲಕ ಶಾಲಾ ಪರಿಸರವನ್ನು ಸುಂದರಗೊಳಿಸಿದ ಪ್ರತಿಭಾ ಅವರು ಶಾಲೆಯಲ್ಲಿ ಮಕ್ಕಳನ್ನು ಆಕರ್ಷಿಸುವ ಆಂಗ್ಲಭಾಷಾ ಕಲಿಕೋಪಕರಣ ಗಳನ್ನು ಒಳಗೊಂಡ ವಿಶೇಷವಾದ ಆಂಗ್ಲ
ಕಲಿಕೆಯ ತರಗತಿಯನ್ನು ರೂಪಿಸಿ ಮೆಚ್ಚುಗೆ ಗಳಿಸಿದ್ದಾರೆ.

ಶಾಲಾ ಗೋಡೆಗಳ ಮೇಲೆ ವರ್ಲಿ ಆರ್ಟ್ ,ಕಸದಿಂದ ರಸ ಪರಿಕಲ್ಪನೆಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿಕೊಂಡು ರಚಿಸಿದ ತೂಗುಯ್ಯಾಲೆ ಮಾದರಿಯ ಬಾಟಲ್ ಗಾರ್ಡನ್, ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳ ಎಂಬ ಶಾಸಕರ ಪರಿಕಲ್ಪನೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಅಳವಡಿಸಲಾದ ಗುಬ್ಬಚ್ಚಿ ಸ್ಪೋಕನ್ ಇಂಗ್ಲೀಷ್ ಎಂಬ ಕಾರ್ಯಕ್ರಮದ ತಂಡದ ನೋಡಲ್ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ ಹೀಗೆ ಹಲವು ಸಾಧನೆಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ.





















