ಕಂಗನಾ ಕಚೇರಿ ನೆಲಸಮಕ್ಕೆ ತಡೆ

ಮುಂಬಯಿ, ಸೆ. 9: ಶಿವಸೇನೆಗೆ ಸಡ್ಡು ಹೊಡೆದಿರುವ ನಟಿ ಕಂಗನಾ ರಣಾವತ್‌ ಅವರ ಕಚೇರಿಯನ್ನು ಅನಧಿಕೃತ ನಿರ್ಮಾಣ ಎಂಬ ಕಾರಣ ಹೇಳಿ ನೆಲಸಮಗೊಳಿಸುವ ಕೆಲಸವನ್ನು ಬಿಎಂಸಿ ಪ್ರಾರಂಭಿಸಿದ್ದು, ಈ ನಡುವೆ ನಟಿ  ನ್ಯಾಯಾಲಯದ ಮೆಟ್ಟಿಲೇರಿ ನೆಲಸಮ ಕಾರ್ಯಾಚರಣೆಗೆ ತಡೆಯಾಜ್ಞೆ ತರುವಲ್ಲಿ ಸಫಲರಾಗಿದ್ದಾರೆ.

ಇಂದು ಬೆಳಗ್ಗೆಯೇ ಬಿಎಂಸಿ ಅಧಿಕಾರುಗಳು ಜೆಸಿಬಿ ಯಂತ್ರಗಳು ಮತ್ತು  ಸಿಬಂದಿಗಳ ಜೊತೆ ಬಂದು ನೆಲಸಮ ಕಾರ್ಯಾಚರಣೆ  ಪ್ರಾರಂಭಿಸಿದರು. ಈ ಚಿತ್ರಗಳನ್ನು ಸ್ವತಃ ಕಂಗನಾ ತನ್ನ ಟ್ವಿಟ್ಟರ್‌ನಲ್ಲಿ ಹಾಕಿ ನನ್ನ ಕಚೇರಿಯನ್ನು ಕೆಡವಬಹುದು, ಆದರೆ ನನ್ನ ಛಲವನ್ನು ಕೆಡಹಲಾರಿರಿ ಎಂದು ಬರೆದುಕೊಂಡಿದ್ದಾರೆ.

 ಈ ನಡುವೆ ಕಂಗನಾ ವಕೀಲರು ಕೋರ್ಟ್‌  ಮೆಟ್ಟಿಲೇರಿ ಕಾರ್ಯಾಚರಣೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.











































error: Content is protected !!
Scroll to Top