ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವ : ಶ್ರೀವರ್ಮ ಅಜ್ರಿ

ಕಾರ್ಕಳ, ಸೆ. 8: ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ  ಶ್ರೀವರ್ಮ ಅಜ್ರಿ ಎಂ. ಅವರು ಮಾತನಾಡಿ ಕ್ರೀಡೆಗಳ ಮಹತ್ವ ಹಾಗೂ ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಮಹತ್ವವನ್ನು ತಿಳಿಸಿ ಜೊತೆಗೆ ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರೆನೀಡಿದರು.  ಕಾಲೇಜಿನ ಕ್ರೀಡಾಚಟುವಟಿಕೆಗಳ ಬಗ್ಗೆ ವಿವರಿಸಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಾಲೇಜಿನ ಸಾಧನೆಯನ್ನು ಶ್ಲಾಘಿಸಿದರು.

     ಪಿಜಿ ವಿಭಾಗದ ಮುಖ್ಯಸ್ಥರಾದ ವಿದ್ಯಾಧರ ಹೆಗ್ಡೆ ಎಂ. ಅವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮಹತ್ವ ಬಗ್ಗೆ ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ  ಜ್ಯೋತಿ ಎಲ್‌. ಜೆ. ಶುಭ ಕೋರಿದರು. ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ  ಕೃಷ್ಣಮೂರ್ತಿ ವೈದ್ಯ ಸ್ವಾಗತಿಸಿದರು. ಗ್ರಂಥಪಾಲಕ ವೆಂಕಟೇಶ ವಂದಿಸಿದರು.









































































































error: Content is protected !!
Scroll to Top