ಬಾಬು ನಲ್ಕೆಯವರ ಸಹೋದರ ನಿಧನ

ಕಾರ್ಕಳ, ಸೆ. 8:ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವ ನರ್ತಕ ಬೋಳ  ಬಾಬು ನಲ್ಕೆಯವರು  ಹೃದಯಾಘಾತವಾಗಿ ತೀರಿಕೊಂಡ ಎರಡೇ ದಿನದಲ್ಲಿ  ಅವರ ಸಹೋದರ ಶೇಷು ನಲ್ಕೆಯವರೂ  ಹೃದಯಾಘಾತಕ್ಕೆ ಬಲಿಯಾಗಿ, ಎರಡು   ದಿನಗಳ  ಅಂತರದಲ್ಲಿ ಈ ಕುಟುಂಬ ಎರಡು ಸಾವುಗಳನ್ನು ಕಾಣುವಂತಾಯಿತು.

ಬಾಬು ನಲ್ಕೆಯವರು ಸೆ.5ರಂದು ತೀರಿಕೊಂಡಿದ್ದರು. ಅಣ್ಣನ ಅಂತ್ಯಕ್ರಿಯೆಯಲ್ಲಿ ಶೇಷು ನಲ್ಕೆಯವರು ಭಾಗವಹಿಸಿದ್ದರು. ಸೆ.7ರಂದು ಶೇಷು ನಲ್ಕೆಯವರೂ ಹೃದಯಾಘಾತಕ್ಕೆ ಬಲಿಯಾದರು.ಬಾಬು ನಲ್ಕೆಯವರ ಜೊತೆಗೆ ದೈವ ನರ್ತನಕ್ಕೆ ಸಹಾಯಕರಾಗಿ ಶೇಷು ನಲ್ಕೆಯವರು ಹೋಗುತ್ತಿದ್ದರು. ಹೀಗೆ ಎರಡೇ ದಿನದ ಅಂತರದಲ್ಲಿ ದೈವ ಚಾಕರಿ ಮಾಡುತ್ತಿದ್ದವರು ದೈವ ಪಾದ ಸೇರಿರುವುದು ಊರಿನಲ್ಲಿ ಅಚ್ಚರಿಗೆ ಕಾರಣವಾಗಿದೆ.

ಅಜಾತಶತ್ರುವಿನಂತಿದ್ದ ಶೇಷು ನಲ್ಕೆಯವರು ಊರಿನವರ ಗೌರವಾದರಗಳಿಗೆ ಪಾತ್ರರಾಗಿದ್ದರು. ಅವರು ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.









































































































error: Content is protected !!
Scroll to Top