ರಾಜ್ಯೋತ್ಸವ ಪ್ರಸಸ್ತಿ ವಿಜೇತ ಬೋಳ ಬಾಬು ನಲ್ಕೆ ನಿಧನ

ಕಾರ್ಕಳ,ಸೆ. 6:ಬಹುಕಾಲ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದ ಬೋಳ ಬಾಬು ನಲ್ಕೆ (85) ಅವರು ಸೆ.6ರಂದು ಹೃದಯಾಘಾತವಾಗಿ ನಿಧನರಾಗಿದ್ದಾರೆ.ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ , ಲೋಕ ವಿಜ್ಞಾನ ಪ್ರಶಸ್ತಿ  ಸೇರಿ ಹಲವು ಪ್ರಶಸ್ತಿ, ಸಮ್ಮಾನಗಳಿಗೆ ಪಾತ್ರರಾಗಿದ್ದರು.

ದೈವ ನರ್ತಕರಾಗಿ ತನ್ನದೇ ಪರಂಪರೆಯನ್ನು ಹೊಂದಿದ್ದ ಅವರು ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದರು.ಕಲ್ಯಾ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ,  ಕುಂಟಾಡಿ ರಕ್ತೇಶ್ವರಿ ದೈವಸ್ಥಾನ ಸೇರಿ ಹಲವೆಡೆ ಅನೇಕ ವರ್ಷ ನಿಷ್ಠೆಯಿಂದ ದೈವ ನರ್ತಕರಾಗಿದ್ದರು. ಒಂದು ಕಾಲದಲ್ಲಿ ಅವರನ್ನು ಬುಕ್ಕಿಂಗ್ ಮಾಡಿ ಕಾಯಬೇಕಿತ್ತು. ಅವರು ಇಬ್ಬರು ಪುತ್ರರು,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

































































error: Content is protected !!
Scroll to Top