ಕಾರ್ಕಳ : . ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಎ.ಬಿ. ಎಂ.ವಿ. ಶಾಸ್ತ್ರೀ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಸನ್ನಿಧಿ ಯು. ಕೋಟ್ಯಾನ್ ಅವರಿಗೆ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 20 ಅಂಕ ಅಧಿಕ ಲಭಿಸಿದೆ. ಗಣಿತದಲ್ಲಿ 10, ವಿಜ್ಞಾನದಲ್ಲಿ 8, ಇಂಗ್ಲೀಷ್ ವಿಷಯದಲ್ಲಿ 2 ಅಧಿಕ ಅಂಕ ಬಂದಿದ್ದು, ಇದೀಗ ಅವರ ಒಟ್ಟು ಅಂಕಗಳು 572 ಆಗಿವೆ. ಅವರು ಉದಯ ಕೋಟ್ಯಾನ್ ಮತ್ತು ಸುರೇಖಾ ಕೋಟ್ಯಾನ್ ಅವರ ಪುತ್ರಿ.
ಮರುಮೌಲ್ಯ ಮಾಪನದಲ್ಲಿ ಸನ್ನಿಧಿ ಯು. ಕೋಟ್ಯಾನ್ಗೆ 20 ಅಧಿಕ ಅಂಕ































