ಖೇಲ್‌ ರತ್ನಕ್ಕೆ ಕ್ರೀಡಾಪಟು ಹೆಸರಿಡಲು ಬಬಿತಾ ಪೋಗಟ್‌ ಆಗ್ರಹ

ದಿಲ್ಲಿ, ಸೆ.2: ಕ್ರೀಡಾ ಸಾಧಕರಿಗೆ  ಪ್ರತಿ ವರ್ಷ ನೀಡುವ ಅತ್ಯುನ್ನತ ಪ್ರಶಸ್ತಿ ‘ಖೇಲ್ ರತ್ನ’ಕ್ಕೆ ರಾಜೀವ್ ಗಾಂಧಿ ಬದಲು ಸಾಧಕ ಕ್ರೀಡಾಪಟುವೊಬ್ಬರ  ಹೆಸರಿಡಬೇಕು ಎಂದು ಖ್ಯಾತ ಕುಸ್ತಿಪಟು, ಬಿಜೆಪಿ ಸದಸ್ಯೆ, ಹರ್ಯಾಣ ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಬಬಿತಾ ಪೊಗಟ್ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

ಕ್ರೀಡಾ ಸಾಧಕರನ್ನು ಗೌರವಿಸುವ ಈ ಪ್ರಶಸ್ತಿಗೆ ಒಲಿಂಪಿಕ್, ಏಷ್ಯಾ ಅಥವಾ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಹಲವು ಪದಕಗಳನ್ನು ಗೆದ್ದು ಸಾಧನೆ ಮಾಡಿರುವವರ ಹೆಸರನ್ನು ಇಡುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿ, ಸಾಧಕ ಕ್ರೀಡಾಪಟುವಿನ ಹೆಸರಿನಲ್ಲಿ ಸಿಕ್ಕಾಗ ಆ ಪ್ರಶಸ್ತಿ ಪಡೆದವರಿಗೆ ಹೆಚ್ಚು ಸಂತೋಷವಾಗುತ್ತದೆ, ಜೊತೆಗೆ ಆ ಪ್ರಶಸ್ತಿ ಪಡೆದಿರುವುದಕ್ಕೂ ಹೆಮ್ಮೆ ಪಡುತ್ತಾರೆ ಎಂದು ಪೊಗಟ್ ಅನಿಸಿಕೆಗಳನ್ನು ತಿಳಿಸಿದ್ದಾರೆ. ಬಬಿತಾ ಸಹೋದರಿ ವಿನೇಶಾ ಪೊಗಟ್ ಈ ಬಾರಿಯ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.















































































































































error: Content is protected !!
Scroll to Top