ಕಾರ್ಕಳ, ಸೆ.1: ತೆಳ್ಳಾರು- ಉದ್ದಪಲ್ಕೆ-ಹಿರ್ಗಾನ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಇಂದು ಪತ್ತೊಂಜಿಕಟ್ಟೆ ಸಮೀಪ ಪೊಲ್ಲಾರಿನಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉದಯ್ ಎಸ್. ಕೋಟ್ಯಾನ್, ಗಿರೀಶ್ ಶೆಟ್ಟಿ, ಅನಂತಕೃಷ್ಣ ಶೆಣೈ ಪಂಚಾಯತ್ ಅಧ್ಯಕ್ಷೆ ದೇವಕಿ ಮತ್ತಿತರರು ಉಪಸ್ಥಿತರಿದ್ದರು.
ಈಗ ಒಂದು ಕಚ್ಚಾ ರಸ್ತೆ ಇದೆಯಾದರೂ ಅದು ಸಂಚಾರ ಯೋಗ್ಯವಲ್ಲ. ಹೀಗಾಗಿ ಹೊಸ ರಸ್ತೆ ನಿರ್ಮಿಸಲುದ್ದೇಶಿಸಲಾಗಿದ್ದು, ಇದಕ್ಕೆ 7.50ಕೋ.ರೂ. ಅನುದಾನ ಮಂಜೂರಾಗಿದೆ. ಈ ರಸ್ತೆ ತೆಳ್ಳಾರಿನಿಂದ ನೇರವಾಗಿ ಹಿರ್ಗಾನವನ್ನು ಸಂಪರ್ಕಿಸುತ್ತದೆ. ಮಹೇಶ್ ಶೆಟ್ಟಿ ಕುಡುಪುಲಾಜೆ ಅವರು ಈ ರಸ್ತೆಗಾಗಿ ವಿಶೇಷ ಪ್ರಯತ್ನಪಟ್ಟಿದ್ದರು.


























