ಮಧ್ಯಾಹ್ನ ಪ್ರಣವ್‌ ಮುಖರ್ಜಿ ಅಂತ್ಯಕ್ರಿಯೆ

ದಿಲ್ಲಿ, ಸೆ. 1: ಸೋಮವಾರ ನಿಧನರಾಗಿರುವ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣವ್‌ ಮುಖರ್ಜಿ ಅಂತ್ಯಕ್ರಿಯೆ ದಿಲ್ಲಿಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ.ಅವರ ಪಾರ್ಥಿವ ಶರೀರವನ್ನು ರಾಜಾಜಿ ಮಾರ್ಗದಲ್ಲಿರುವ ನಿವಾಸಕ್ಕೆ ತರಲಾಗಿದೆ.ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಶ್ವಾಸಕೋಶದ ಸೋಂಕಿಗೆ ತುತ್ತಾಗಿ ಆ.10ರಂದು ದಿಲ್ಲಿಯ ಆರ್ಮೀಸ್‌ ರೀಸರ್ಚ್‌ ಆಂಡ್‌ ರೆಫರಲ್‌ ಆಸ್ಪತ್ರೆಗೆ ದಾಖಲಾಗಿದ್ದ ಪ್ರಣವ ಮುಖರ್ಜಿ ಸೋಮವಾರ ಸಂಜೆ ತೀರಿಕೊಂಡಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಹಾಗೂ ಕೊರೊನಾ ಸೋಂಕು ತಗಲಿರುವುದ ದೃಢಪಟ್ಟಿತ್ತು. ಕೇಂದ್ರ ಸರಕಾರ ಪ್ರಣವ ಮುಖರ್ಜಿ ಗೌರವಾರ್ಥ 7 ದಿನಗಳ ರಾಷ್ಟ್ರೀಯ ಶೋಕ ಘೋಷಿಸಿದೆ.   









































































































error: Content is protected !!
Scroll to Top