ರೈನಾ ಐಪಿಎಲ್ ನಿಂದ ಅರ್ಧದಲ್ಲಿಯೇ ಹೊರಬಂದದ್ದೇಕೆ? ಕ್ರಿಕೆಟಿಗ ಬಹಿರಂಗಪಡಿಸಿದರು ಬೆಚ್ಚಿಬೀಳಿಸುವ ಸತ್ಯ

ಮುಂಬಯಿ, ಸೆ.1: ಸುರೇಶ್‌  ರೈನಾ ಐಪಿಎಲ್‌ ಕೂಟದಿಂದ ದಿಢೀರ್‌ ಎಂದು ಹೊರಬಂದದ್ದೇಕೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆ ಕ್ರಿಕೆಟ್‌ ಅಭಿಮಾನಿಗಳ ತಲೆ ತಿನ್ನುತ್ತಿತ್ತು. ಇದೀಗ ಈ ಪ್ರಶ್ನೆಗೆ ಸ್ವತಃ ಸುರೇಶ್‌ ರೈನಾ ಉತ್ತರ ಕೊಟ್ಟಿದ್ದಾರೆ. ಆದರೆ ಅವರು ಹೇಳಿರುವ ಕಾರಣ ಮಾತ್ರ ಬೆಚ್ಚಿಬೀಳಿಸುವಂತಿದೆ.

ಪಂಜಾಬ್ ನಲ್ಲಿರುವ ತನ್ನ ಕುಟುಂಬಕ್ಕಾದ ಭೀಕರ ಸ್ಥಿತಿಯೇ ತಾನು ಯುಎಇಯಿಂದ ವಾಪಾಸು ಬರಲು ಕಾರಣ ಎಂದು ಬಹಿರಂಗಪಡಿಸಿದ್ದಾರೆ ರೈನಾ.

ಪಂಜಾಬ್‌ನಲ್ಲಿ ನನ್ನ ಕುಟುಂಬಕ್ಕಾಗಿರುವ ಗತಿ ಅತಿ ಭೀಕರ. ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.

ನನ್ನ ಚಿಕ್ಕಪ್ಪ ಮತ್ತ ಸಹೋದರನನ್ನು ಕೊಂದು ಹಾಕಿದರು, ಚಿಕ್ಕಮ್ಮ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈಗಲೂ ಆ ರಾತ್ರಿ ನಿಜವಾಗಿ ನಡೆದದ್ದು ಏನು ಎನ್ನುವುದು ನಮಗಿನ್ನೂ ಗೊತ್ತಾಗಿಲ್ಲ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪಂಜಾಬ್‌ ಪೊಲೀಸರು ಮತ್ತು ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರನ್ನು ವಿನಂತಿಸುತ್ತೇನೆ. ಕನಿಷ್ಠ ಯಾರು ಈ ಕೃತ್ಯ ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಾಗಬೇಕು ಮತ್ತು ಬೇರೆ ಯಾರಿಗೂ ಈ ಗತಿಯಾಗಬಾರದು ಎಂದು ರೈನಾ ಟಿಟ್ಟರ್‌ ನಲ್ಲಿ ಬರೆದುಕೊಂಡಿದ್ದಾರೆ.  

ಐಪಿಎಲ್‌ ಆಡಲು ಯುಎಇಗೆ ಹೋಗಿದ್ದ ರೈನಾ ಕೂಟ ಶುರುವಾಗುವುದಕ್ಕಿಂತಲೂ ಮುಂಚೆಯೇ ವಾಪಾಸು ಬಂದದ್ದು ಕ್ರಿಕೆಟ್‌ ಅಭಿಮಾನಿಗಳಿಗೆ ಆಘಾತ ನೀಡಿದ್ದಲ್ಲದೆ ನಾನಾ ರೀತಿಯ ಊಹಾಪೋಹಗಳಿಗೂ ಕಾರಣಾವಾಗಿತ್ತು. ಈ ಹಿನ್ನೆಲೆಯಲ್ಲಿ ರೈನಾ ಕಾರಣ ಬಹಿರಂಗಪಡಿಸಿದ್ದಾರೆ.





























































































error: Content is protected !!
Scroll to Top