ಬೈಲೂರು,ಆ. 19 : ಬೈಲೂರು ಕೆಳಪೇಟೆ ಹೈಸ್ಕೂಲು ಸಮೀಪ ಬಸ್ ನಿಲ್ದಾಣದ ಪಕ್ಕ ನಿರ್ಮಿಸಲಾಗಿರುವ ಸುಸಜ್ಜಿತ ದ್ವಿಚಕ್ರ ವಾಹನ ತಂಗುದಾಣವನ್ನು ಬುಧವಾರ ಉದ್ಘಾಟಿಸಲಾಯಿತು. ಬೈಲೂರಿನ ಉದ್ಯಮಿ ಜೆ.ಸುಧೀರ್ ಹೆಗ್ದೆ, ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಮತ್ತು ಲಯನ್ಸ್ ಗವರ್ನರ್ ಎನ್.ಎಂ.ಹೆಗ್ದೆ ಉದ್ಘಾಟನೆ ನೆರವೇರಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಅವರ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಲಯನ್ಸ್ ಕ್ಲಬ್ ನೀರೆ ಬೈಲೂರು ಸಹಯೋಗದಲ್ಲಿ ಸುಮಾರು 3.5 ಲಕ್ಷ ರೂ. ವೆಚ್ಚದಲ್ಲಿ ಈ ತಂಗುದಾಣವನ್ನು ನಿರ್ಮಿಸಲಾಗಿದೆ.
ನಿತ್ಯ ಕಾಯಕಕ್ಕಾಗಿ ಬೈಲೂರಿನಿಂದ ಹೊರ ಊರುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತಿತರರಿಗೆ ದ್ವಿಚಕ್ರ ವಾಹನ ನಿಲ್ಲಿಸಲು ತಂಗುದಾಣ ಬೇಕೆಂಬ ಬೇಡಿಕೆ ಬಹುಕಾಲದಿಂದ ಇತ್ತು.
ಈ ಸಂದರ್ಭದಲ್ಲಿ ನೀರೆ-ಬೈಲೂರು ಲಯನ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ, ಸಾಯಿರಾಂ, ಹಿರಿಯ ಮುಖಂಡರಾದ ಸಚ್ಚಿದಾನಂದ ಶೆಟ್ಟಿ ಕೌಡೂರು, ಪ್ರಾಂತೀಯ ಅಧ್ಯಕ್ಷರಾದ ಉದಯ ಹೆಗ್ಡೆ, ತಾ.ಪಂ ಸದಸ್ಯೆ ಮಾಲಿನಿ ಜೆ. ಶೆಟ್ಟಿ, ನಿರ್ಮಲಾ ರಾಣೆ, ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಶೆಟ್ಟಿ, ವಸಂತ್ , ಉಪಾಧ್ಯಕ್ಷ ಜಗದೀಶ್ ಪೂಜಾರಿ ವಲಯ ಅಧ್ಯಕ್ಷ ನೋವೆಲ್ ಡಿʼಸೋಜ ,ಲಯನ್ಸ್ ಬಂಧುಗಳು, ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷರು, ಸದಸ್ಯರು, ಎಲ್ಲಾ ಭಾಗದ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.