ನಿತ್ಯ ಭವಿಷ್ಯ -20-08-2020

ಮೇಷ   

ಜನ್ಮದ ಕುಜ ನಿಮ್ಮ ವೈಯಕ್ತಿಕ ಜೀವನದಲ್ಲಿ ಕೋಪವನ್ನು ತರಬಹುದು. ಚಿಕ್ಕಪುಟ್ಟ ವಿಷಯಗಳಿಗೆ  ಕುಟುಂಬ ಸದಸ್ಯರೊಡನೆ ಸಿಟ್ಟುಗೊಳ್ಳುವುದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಧನಾದಾಯವಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಮಿಶ್ರ ಫಲವನ್ನು ಪಡೆಯಲಿದ್ದೀರಿ .ಈಶ್ವರ ದೇವರನ್ನು ಪ್ರಾರ್ಥಿಸಿರಿ.

ವೃಷಭ

ನಿಮ್ಮ ವೈವಾಹಿಕ ಜೀವನದಲ್ಲಿ ಅಪಶ್ರುತಿ ಬರದಂತೆ ಎಚ್ಚರವಹಿಸಿರಿ. ಹೊಸ ಮನೆ ಮತ್ತು ವಾಹನ ಖರೀದಿ ಮಾಡುವ ಚಿಂತನೆ ಮಾಡುತ್ತಿರುವಿರಿ. ಅದಕ್ಕಾಗಿ ಹಣ ಹೊಂದಾಣಿಕೆಗೆ ಹೋರಾಡುವಿರಿ. ಆರೋಗ್ಯದ ಕಡೆಗೆ ಗಮನ ಕೊಡಲು ಮರೆಯಬೇಡಿರಿ. ಬೇರೆಯವರ ವಿಷಯದಲ್ಲಿ ಮೂಗು ತೂರಿಸಬೇಡಿರಿ. ಮಾತಿನಲ್ಲಿ ಹಿಡಿತವಿರಲಿ.ದುರ್ಗೆಯ ಮಂತ್ರ 108 ಬಾರಿ ಪ್ರತಿನಿತ್ಯ ಪಠಿಸುವುದು ಒಳಿತನ್ನುಂಟು ಮಾಡುವುದು.

ಮಿಥುನ 

ಧನಾಗಮನ ಬಹಳ ಉತ್ತಮವಾಗಿದ್ದು 31 ತಾರೀಕಿನ ನಂತರ ಇನ್ನೂ ಉತ್ತಮಗೊಳ್ಳಲಿದೆ. ಹಿರಿಯರ ಸಲಹೆಗಳನ್ನು ಸ್ವೀಕರಿಸುವ ದೊಡ್ಡ ಗುಣ ನಿಮ್ಮಲ್ಲಿ ಇದ್ದರೆ ಈಗ ಇರುವ ಕಷ್ಟ ಬರುತ್ತಿರಲಿಲ್ಲ. ವಾಹನ ಚಾಲಕರೆ ಎಚ್ಚರವಹಿಸಿರಿ. ಸೋಲನ್ನು ಒಪ್ಪಿ ಗುರಿಯನ್ನು ಸಾಧಿಸಿದಲ್ಲಿ ಯಶಸ್ಸು ನಿಮ್ಮದಾಗಲಿದೆ.

ಕರ್ಕಾಟಕ

ಸ್ವಯಂಕೃತ ಅಪರಾಧಗಳಿಗೆ  ಯಾರನ್ನು ಹೊಣೆಗಾರರನ್ನಾಗಿ ಮಾಡಬೇಡಿ. ಎಲ್ಲದಕ್ಕೂ  ಹಿಡಿತವಿಲ್ಲದ ನಿಮ್ಮ ಮನಸ್ಸು ಕಾರಣ. ಇನ್ನಾದರೂ ಸರಿಯಾದ ದಾರಿಗೆ ಬನ್ನಿರಿ. ನಿತ್ಯವೂ ದೇವಿ ಸ್ತೋತ್ರವನ್ನು  ಪಠಿಸುತ್ತಾ ಬನ್ನಿರಿ.  48 ದಿನಗಳ ಕಾಲ  ಮುಂದುವರಿಸಿರಿ. ಕೌಟುಂಬಿಕ ಜೀವನದಲ್ಲಿ ಎಲ್ಲವೂ ಸ್ವಾಭಾವಿಕ. ಸತ್ಯವನ್ನು ಒಪ್ಪಿಕೊಳ್ಳಿರಿ. ನಾಗ ದೇವರನ್ನು ಪ್ರಾರ್ಥಿಸಿರಿ.

ಸಿಂಹ

ದೇವರ ಅನುಗ್ರಹದಿಂದ ಬರುತ್ತಿರುವ ಸಮಸ್ಯೆಗಳೆಲ್ಲ ಕರ್ಪೂರ ಉರಿದು ಮಾಯವಾಗುವಂತೆ ನಿಮಗೆ ಅರಿವಿಲ್ಲದೆಯೇ ಪರಿಹಾರವಾಗಲಿದೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳಿಗೆ ಆಗಾಗ ಅಡೆತಡೆ ಬರುತ್ತಲೇ ಇರುತ್ತದೆ. ಮಕ್ಕಳಿಗೆ ಸಮಾಧಾನದಿಂದ ಹೇಳಿದರೆ ನಿಮ್ಮ ಮಾತು ಒಪ್ಪಿಕೊಳ್ಳುತ್ತಾರೆ. ನೂತನ ದಂಪತಿಗಳಿಗೆ ಸಿಹಿ ಸುದ್ದಿ ಬರಲಿದೆ. ಪೂರ್ವ ಸಿದ್ಧತೆಯೊಂದಿಗೆ ಪ್ರಯತ್ನಿಸುವ ಕೆಲಸವೆಲ್ಲವೂ ಯಶಸ್ವಿಯಾಗಲಿವೆ.

ಕನ್ಯಾ

ಹಲವು ರೀತಿಯಲ್ಲಿ ಧನಾಗಮವಾಗಲಿದ್ದು ಸುಖ ಸಂತೋಷ ನಿಮ್ಮದಾಗಲಿದೆ. ಕೆಲವೊಮ್ಮೆ ನಿಮ್ಮದೇ ತಪ್ಪಿನಿಂದಾಗಿ ವ್ಯರ್ಥ ಖರ್ಚು ನಡೆಯಲಿದೆ. ಜಾಗ್ರತೆ ಇರಲಿ. ಪಂಚಮದಲ್ಲಿ ಶನಿ ಇರುವಾಗ ಇದೆಲ್ಲ ಸ್ವಾಭಾವಿಕ .ಈಶ್ವರ ಅಥವಾ ಶ್ರೀ ವೆಂಕಟ್ರಮಣ ದೇವರನ್ನು ಪ್ರಾರ್ಥಿಸಿರಿ. ವೃತಿರಂಗದಲ್ಲಿ ಯಶಸ್ವಿಯಾಗುವಂತೆ ನೋಡಿಕೊಳ್ಳಿರಿ. ಶತ್ರುಗಳಿಂದ ಆದಷ್ಟು ದೂರವಿರಿ.

ತುಲಾ

ನಿಮ್ಮ ವೈಯಕ್ತಿಕ ಜೀವನ ನಿಮ್ಮ ಮನಸ್ಸಿನ  ವರ್ತನೆಯನ್ನು ಅವಲಂಬಿಸಿದೆ. ಯಾಕೆಂದರೆ ಚತುರ್ಥದಲ್ಲಿ ಶನಿ ಇದ್ದಾನೆ. ಈಶ್ವರ ದೇವರಿಗೆ ಪ್ರತಿ ಸೋಮವಾರ ಎಳ್ಳೆಣ್ಣೆ ಅರ್ಪಿಸುತ್ತಾ ಬರಬೇಕು. ಅಮ್ಮನೊಂದಿಗೆ ಕಲಹ ಬರದಂತೆ ಎಚ್ಚರವಹಿಸಲೇ ಬೇಕು. ನೂತನ ಕಾರ್ಯಗಳಿಗೆ ಕೆಲವೊಮ್ಮೆ ವಿಘ್ನ ಬರಲಿದೆ. ಒಮ್ಮೆಲೇ ಉದ್ವೇಗ ಗೊಳ್ಳಬೇಡಿ. ಅಗತ್ಯವಿದೆ ಎಂದಾಗ ವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿರಿ.

ವೃಶ್ಚಿಕ

ದ್ವಿತೀಯದಲ್ಲಿ ಗುರು ಕೇತು ಇರುವುದರಿಂದ ಹಿರಿಯರ ಆಶೀರ್ವಾದದಿಂದ ನೆಮ್ಮದಿ ಸಿಗಲಿದೆ. ಖರ್ಚುಗಳು  ವಿಪರೀತವಾಗದಂತೆ  ನೋಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಬಹಳ ಎಚ್ಚರ ವಹಿಸಬೇಕು. ಆತ್ಮ ವಿಶ್ವಾಸದಿಂದ ಮುಂದಕ್ಕೆ ಬನ್ನಿರಿ.ಆಗಾಗ ಮನಃಶಾಂತಿಗೆ ಭಂಗ ಬರಲಿದೆ .ಈ ಕಾಲದಲ್ಲಿ ನಿಮ್ಮ ನಿಜವಾದ ಮಿತ್ರರು ಯಾರು ಶತ್ರುಗಳು  ಯಾರು ಎಂದು ಗೊತ್ತಾಗಲಿದೆ.

ಧನು

ಕೆಲಸದ ಹೊರೆ  ಮತ್ತು ಮಾನಸಿಕ ಒತ್ತಡದಿಂದ ದಣಿಯುವಿರಿ. ಕುಟುಂಬದ ಸದಸ್ಯರೊಂದಿಗೆ ಕಲಹ ಬರದಂತೆ ಬಹಳ ಜಾಗ್ರತೆ ವಹಿಸಬೇಕು. ನೀವು ಮಾಡುವ ಖರ್ಚು ವೆಚ್ಚಗಳು ನಿಮ್ಮ ಹಿಡಿತದಲ್ಲಿರಲಿ. ಕೆಲವೊಂದು ಧಾರ್ಮಿಕ ಆಚರಣೆಯಿಂದ ನಿಮಗೆ ಮನಶ್ಶಾಂತಿ ದೊರಕಲಿದೆ. ನಿತ್ಯವೂ ರುದ್ರ ಪಾರಾಯಣ ಮಾಡಿದರೆ ಬಹಳ ಒಳ್ಳೆಯದು.

ಮಕರ

ಶನಿ ಜನ್ಮದಲ್ಲಿ ಇರುವುದರಿಂದ ಈ ಸಮಯದಲ್ಲಿ ಮನೆಯಲ್ಲಿ ಸಣ್ಣ ಪುಟ್ಟ ಜಗಳಗಳು ನಡೆಯಬಹುದು .ನಿಮ್ಮ ಕುಟುಂಬದ ಸದಸ್ಯರೆ ನಿಮ್ಮ ಜೊತೆಗೆ ಕಲಹ ಮಾಡುವ ಸಾಧ್ಯತೆ ಇಲ್ಲದಿಲ್ಲ.  ನಿಮ್ಮ ಆಕ್ರಮಣಕಾರಿ ಸ್ವಭಾವವೂ ನಿಮ್ಮ ಪ್ರೀತಿಪಾತ್ರರಿಂದ  ನಿಮ್ಮನ್ನು ದೂರವಿರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಪತ್ನಿಯ ಸಹಕಾರ ನಿಮಗೆ ದೊರೆಯಲಿದೆ. ನಿಮ್ಮ ಉದ್ಯೋಗದ ಕ್ಷೇತ್ರದಲ್ಲಿ ನೀವು ಬಹಳ ತಾಳ್ಮೆಯಿಂದ ಇರಬೇಕು.

ಕುಂಭ

ಗುರು ಕೇತು ಏಕಾದಶದಲ್ಲಿ ಇದ್ದು, ದೇವರ ಅನುಗ್ರಹ ಉತ್ತಮವಾಗಿರುವುದರಿಂದ ಎಲ್ಲವೂ ಶುಭವಾಗಲಿದೆ . ರಾಜಕೀಯ ಜನರಿಗೆ ಕಿರಿಕಿರಿ ಹೆಚ್ಚಾಗಲಿದೆ. ಕುಟುಂಬ ಹಾಗೂ ಬಂಧುಗಳಿಂದ ನೆಮ್ಮದಿ ದೊರಕಲಿದೆ. ದಾಂಪತ್ಯದಲ್ಲಿ ಆಗಾಗ ವಿರಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಅವಿವಾಹಿತರಿಗೆ ಪ್ರಯತ್ನಬಲದಿಂದ ಕಂಕಣ ಬಲ ಪ್ರಾಪ್ತಿಯಾಗಲಿದೆ.

ಮೀನ 

ರಾಜಕಾರಣಿಗಳಿಗೆ ಬಿರುದು, ಸೂಕ್ತ ಸ್ಥಾನಮಾನ, ಗೌರವ ಪ್ರಾಪ್ತಿಯ ಯೋಗವಿದೆ. ನಿಮಗೆ ವಹಿಸಿದ ಕಾರ್ಯಗಳು ಸಫಲತೆಯನ್ನು ಹೊಂದಲಿವೆ. ಖರ್ಚು ವೆಚ್ಚಗಳಿದ್ದರೂ ಬರುವ ಆದಾಯಕ್ಕೆ ಯಾವುದೇ ಕೊರತೆಯಿರುವುದಿಲ್ಲ. ಮಿತ್ರರ ಸಹಕಾರವಿದ್ದರೂ ಹಿತಶತ್ರುಗಳ ಬಾಧೆ ಇರುತ್ತದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸುಖವಿದೆ. ವಿಷ್ಣು ಸಹಸ್ರನಾಮ ನಿತ್ಯವೂ ಪಾರಾಯಣ ಮಾಡಿರಿ.

ಜ್ಯೋತಿಷ್ಯರು

ಕೆ. ಸುಬ್ರಹ್ಮಣ್ಯ ಆಚಾರ್ಯ

ಕಾರಿಂಜೇಶ್ವರ ಜ್ಯೋತಿಷ್ಯಾಲಯ, ಹಿರಿಯಂಗಡಿ ಕಾರ್ಕಳ.

97414 89529/80739 73603

















































































error: Content is protected !!
Scroll to Top