Wednesday, July 6, 2022
spot_img
Homeಕ್ರೈಂಕುಂಬಳೆ ಕೊಲೆ-ಆತ್ಮಹತ್ಯೆ ರಹಸ್ಯ ಬಯಲು: ಆರೋಪಿ ಬಂಧನ

ಕುಂಬಳೆ ಕೊಲೆ-ಆತ್ಮಹತ್ಯೆ ರಹಸ್ಯ ಬಯಲು: ಆರೋಪಿ ಬಂಧನ

ಕುಂಬಳೆ, ಆ. 19: ಕುಂಬಳೆ ನಾಯ್ಕಾಪಿನ ಆಯಿಲ್ ಮಿಲ್ ನೌಕರ ನಾಯ್ಕಾಪು ಐ.ಸಿ. ರಸ್ತೆ ನಿವಾಸಿ ಹರೀಶ(38) ಎಂಬವರನ್ನು ಬರ್ಬರವಾಗಿ ಕಡಿದು ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಆಯಿಲ್‌ ಮಿಲ್‌ ಸಹ ನೌಕರ, ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಭವನ ಸಮೀಪದ ನಿವಾಸಿ ಶರತ್ ಯಾನೆ ಶ್ರೀಕುಮಾರ್(25) ಬಂಧಿತ ಆರೋಪಿ.

ಶ್ರೀಕುಮಾರನ ಬಂಧನದೊಂದಿಗೆ ಹರೀಶ ಹತ್ಯೆಯ ರಹಸ್ಯ  ಬಯಲಾಗಿದೆ. ಕೊಲೆ ಸಂಭವಿಸಿದ  ಮರುದಿನ ಕುಂಬಳೆ ಗೋಪಾಲಕೃಷ್ಣ ಸಭಾಭವನದ ಹಿಂಭಾಗದ ಶೇಡಿಗುಮ್ಮೆ ಕಾಡಿನಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಯುವಕರು ಕೂಡ ಈ  ಕೃತ್ಯದಲ್ಲಿ ಶಾಮೀಲಾದವರಾಗಿದ್ದು, ಕೃತ್ಯದಲ್ಲಿ  ಒಟ್ಟು ನಾಲ್ವರಿದ್ದರೆಂದು  ದೃಢಪಟ್ಟಿದೆ. ಇನ್ನೋರ್ವನಿಗಾಗಿ ಬಲೆ ಬೀಸಲಾಗಿದೆ. ಗೋಪಾಲಕೃಷ್ಠ ಸಭಾಭವನ ಸಮೀಪದ ಕಾಲನಿ ನಿವಾಸಿಗಳಾದ ಮಣಿ ಯಾನೆ ಮಣಿಕಂಠ(21) ಹಾಗೂ ರೋಶನ್(20) ಎಂಬವರ ಮೃತದೇಹಗಳು ನಿನ್ನೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದುವು. ಇವರ ದೇಹಗಳಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಇದು ಪೊಲೀಸರಲ್ಲಿ ಶಂಕೆ ಮೂಡಿಸಿತ್ತು. ಈ ಕೊಲೆಯಲ್ಲಿ ಆತ್ಮಹತ್ಯೆ ನಡೆಸಿದ ಯುವಕರ ಕೈವಾಡ ಬಗ್ಗೆ ಸಂಶಯ ಬಲಗೊಂಡು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮುಖ್ಯ ಆರೋಪಿ ಶ್ರೀಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ. ಈತನ ಬಂಧನದೊಂದಿಗೆ ಎಲ್ಲ ನಾಲ್ವರು ಅರೋಪಿಗಳನ್ನೂ ಗುರುತಿಸಲಾಯಿತು.

ಹರೀಶರನ್ನು ಸೋಮವಾರ ರಾತ್ರಿ  ದುಷ್ಕರ್ಮಿಗಳು ಕಡಿದು ಕೊಲೆಗೈದಿದ್ದರು. ತಡರಾತ್ರಿ ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ಹರೀಶರ ಮನೆಯ ಕೂಗಳತೆಯ ದೂರದಲ್ಲೇ ಕವಲು ದಾರಿಯ ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ಕಾದು ಕುಳಿತಿದ್ದ ಹಂತಕರು ಆಕ್ರಮಣವೆಸಗಿದ್ದರು. ಕುತ್ತಿಗೆ ಹಾಗೂ ತಲೆಯ ಹಿಂಭಾಗಕ್ಕೆ ಬಿದ್ದ ಇರಿತದಿಂದ ಕುಸಿದು ಬಿದ್ದ ಹರೀಶರನ್ನು ಯದ್ವಾತದ್ವಾ ಕಡಿದು ಸಾಯಿಸಿ  ತಂಡ ಪರಾರಿಯಾಗಿತ್ತು. ಹರೀಶ್‌ಗೆ  ಕಳೆದ ಫೆಬ್ರವರಿ 12 ರಂದು ಮದುವೆಯಾಗಿದ್ದು, ಅವರ ಪತ್ನಿ ಗರ್ಭಿಣಿಯಾಗಿದ್ದಾರೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!