ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಕಾರ್ಕಳ ಯುವಕನ ಬಂಧನ

0

ಹೆಬ್ರಿ : ಮಂಗಳೂರು ವಿಮಾನ ನಿಲ್ದಾಣಕ್ಕೆ ಆ. 19ರಂದು ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಕಾರ್ಕಳ ಮುದ್ರಾಡಿ ಯುವಕನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುದ್ರಾಡಿ ಗ್ರಾಮದ ಬಲ್ಲಾಡಿ ತುಂಡುಗುಡ್ಡೆ ವಸಂತ (33) ಎಂಬವನೇ ಬೆದರಿಕೆ ಮಾಡಿದ ಯುವಕ.

ಹೊಟೇಲ್‌ ಕಾರ್ಮಿಕನಾಗಿದ್ದ ಈತ ಆ. 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡುವುದಾಗಿ ಬೆದರಿಕೆಯೊಡ್ಡಿದ್ದ. ವಿಮಾನ ನಿಲ್ದಾಣ ಸಿಬ್ಬಂದಿ ತಕ್ಷಣವೇ ಬಜ್ಪೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ವಸಂತನನ್ನು ಕಾರ್ಕಳ ಮುದ್ರಾಡಿಯ ಮನೆಯಿಂದ ವಶಕ್ಕೆ ಪಡೆದಿರುತ್ತಾರೆ. ಕಾರ್ಯಚರಣೆ ವೇಳೆ ಹೆಬ್ರಿ ಠಾಣೆ, ಬಜ್ಪೆ ಠಾಣೆ ಹಾಗೂ ಸಿಸಿಬಿ ಪೊಲೀಸರಿದ್ದರು.

ಮತ್ತೆ ನೆನಪಿಸಿತು ಆದಿತ್ಯ ರಾವ್ ಪ್ರಕರಣ‌
2020ರ ಜನವರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ  ಆದಿತ್ಯ ರಾವ್‌ ಎಂಬಾತನನ್ನು ಬಂಧಿಸಲಾಗಿತ್ತು. ಈತ ಅಂದು ಕಾರ್ಕಳದ ಬಾರ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಇಲ್ಲಿಂದಲೇ ಷಡ್ಯಂತ್ರ್ಯ ರೂಪಿಸಿದ್ದ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣದ ಆರೋಪಿ ಆದಿತ್ಯ ರಾವ್‌ ಬಳಿಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಕಚೇರಿಗೆ ತೆರಳಿ ಐಜಿಪಿ ಎದುರು ಶರಣಾಗಿದ್ದ.---
Previous articleಕುಂಬಳೆ ಕೊಲೆ-ಆತ್ಮಹತ್ಯೆ ರಹಸ್ಯ ಬಯಲು: ಆರೋಪಿ ಬಂಧನ
Next articleಆಗಸ್ಟ್ 20-ಕೊಂಕಣಿ ಮಾನ್ಯತಾ ದಿವಸ್

LEAVE A REPLY

Please enter your comment!
Please enter your name here