ಮೂರು ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆ ಅದಾನಿ ಗ್ರೂಪ್‌ಗೆ : ಸಂಪುಟ ತೀರ್ಮಾನ

0

 ದಿಲ್ಲಿ, ಆ. 19: ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ(ಪಿಪಿಪಿ) ಮೂಲಕ ಅದಾನಿ ಸಮೂಹಕ್ಕೆ ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ  ನಾಗರಿಕ ವಿಮಾನ ಯಾನ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೂರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮತ್ತು ಎಎಐ ಮೂಲಕ ಗುತ್ತಿಗೆಗೆ ನೀಡಲು ಅನುಮೋದಿಸಿದೆ. ಇದರಿಂದ ಸುಮಾರು 1,070 ಕೋಟಿ ರೂ.ಗಳಿಕೆ ಸಿಗುವುದಲ್ಲದೆ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ಸಿಗುತ್ತವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌  ತಿಳಿಸಿದ್ದಾರೆ.

ಖಾಸಗಿ- ಸರ್ಕಾರಿ ಸಹಭಾಗಿತ್ವದ  ಆಧಾರದ ಮೇಲೆ 50 ವರ್ಷಗಳ ಗುತ್ತಿಗೆಗೆ ಈ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಮತ್ತು ಅಭಿವೃದ್ಧಿಪಡಿಸುವ ಹಕ್ಕನ್ನು ಖಾಸಗಿ ಕಂಪನಿಗಳಿಗೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

 

 ---
Previous articleನೆರೆ ನೀರಿನಿಂದ ರಕ್ಷಿಸಲು 2400 ವರ್ಷ ಹಿಂದಿನ ಮಮ್ಮಿ ಬಾಕ್ಸ್‌ ನಿಂದ ಹೊರಕ್ಕೆ
Next articleನಿತ್ಯ ಭವಿಷ್ಯ -20-08-2020

LEAVE A REPLY

Please enter your comment!
Please enter your name here