
ಜೈಪುರ, ಆ. 19 : ಜೈಪುರದ ವಸ್ತ ಸಂಗ್ರಹಾಲಯದಲ್ಲಿದ್ದ 2400 ವರ್ಷಗಳಷ್ಟು ಹಳೆಯದಾಗಿರುವ ಈಜಿಪ್ಟ್ನ ಮಮ್ಮಿಯನ್ನು ಮಳೆಯಿಂದ ರಕ್ಷಿಸುವ ಸಲುವಾಗಿ ಹೊರಕ್ಕೆ ತೆಗೆಯಲಾಗಿದೆ.
ಈಜಿಪ್ಟ್ ಪಾನೊಪೊಲೀಸ್ ನಗರದ ಅಖ್ಮಿನ್ ಪ್ರಾಂತ್ಯದ ಟುಟು ಎಂಬ ಮಹಿಳೆಯ ಮಮ್ಮಿ ಇದಾಗಿದ್ದು, 130 ವರ್ಷಗಳ ಹಿಂದೆ ಅಲ್ಲಿಂದ ರಾಜಸ್ಥಾನಕ್ಕೆ ತರಲಾಗಿತ್ತು.
130 ವರ್ಷಗಳ ಹಿಂದೆ ಈ ಮಮ್ಮಿಯನ್ನು ಬಾಕ್ಸ್ನಿಂದ ಹೊರಕ್ಕೆ ತೆರೆಯಲಾಗಿತ್ತು. ಇದೀಗ ಮತ್ತೆ ತೆಗೆದು ರಕ್ಷಣೆ ಮಾಡಲಾಗಿದೆ. ಇದನ್ನು ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ.
ಆಗಸ್ಟ್ 14 ರಂದು ಸುರಿದ ಭಾರಿ ಮಳೆಗೆ ಅಲ್ಬರ್ಟ್ ಹಾಲ್ ಮ್ಯೂಸಿಯಂ ಒಳಗೆ ನೀರು ನುಗ್ಗಿದೆ. ಪ್ರವಾಹದಿಂದ ರಕ್ಷಿಸಲು ಈ ಮಮ್ಮಿಯನ್ನು 130 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಕ್ಸ್ನಿಂದ ಹೊರ ತೆಗೆಯಲಾಗಿದೆ.
ಮ್ಯೂಸಿಯಂ ಒಳಗೆ ಐದು ಅಡಿಗಳ ಎತ್ತರಕ್ಕೆ ನೀರು ಬಂದಿದೆ. ಇದರಿಂದ ಗ್ಲಾಸ್ ಬಾಕ್ಸ್ ಒಡೆದು ಅದರಿಂದ ಮಮ್ಮಿಯನ್ನು ಹೊರ ತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಸೆಂಟ್ರಲ್ ಮ್ಯೂಸಿಯಂನ ಮೇಲ್ವಿಚಾರಕ ಡಾ.ರಾಕೇಶ್ ಚೋಲಾಕ್ ತಿಳಿಸಿದ್ದಾರೆ.