ಸೆಪ್ಟೆಂಬರ್‌ನಲ್ಲಿ ಸಿನೇಮಾ ಮಂದಿರ ಓಪನ್‌ ಸಾಧ್ಯತೆ

0

ದಿಲ್ಲಿ, ಆ. 19: ಕೊರೊನಾ ಕಾರಣದಿಂದ ಸುಮಾರು ಐದು ತಿಂಗಳ ಕಾಲ ಸ್ತಬ್ಧವಾಗಿದ್ದ ದೇಶ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದ್ದು,  ಹಂತ ಹಂತವಾಗಿ ಅನ್‌ಲಾಕ್‌ ಆಗುತ್ತಿದೆ. ಇದೀಗ ಮುಂದಿನ ಹಂತದಲ್ಲಿ ಸಿನೇಮಾ ಮಂದಿರಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆಯಿದೆ.

ಸೆಪ್ಟೆಂಬರ್‌ನಲ್ಲಿ  ಸಿನೇಮಾ ಮಂದಿರಗಳು ಪುನರಾರಂಭವಾಗುವ ಸಾಧ್ಯತೆಯಿದೆ. ಆದರೆ ಮಾಲ್ ಗಳಲ್ಲಿ ಇರುವ ಸಿನೇಮಾ ಮಂದಿರಗಳಿಗೆ ಮತ್ತು ಮಲ್ಟಿಫ್ಲೆಕ್ಸ್‌ ಗಳಿಗೆ ಈಗ ಅನುಮತಿ ಕೊಡುವುದಿಲ್ಲ. ಸಿಂಗಲ್‌ ಸಿನೇಮಾ ಕಾಂಪ್ಲೆಕ್ಸ್‌ಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿನೇಮಾ ಮಂದಿರಗಳಿಗೆ  ಕಟ್ಟುನಿಟ್ಟಿನ  ಮಾರ್ಗಸೂಚಿ ರಚನೆಯಾಗುತ್ತಿದೆ. ಮಧ್ಯದ ಸೀಟ್‌  ಖಾಲಿ ಬಿಟ್ಟು ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕಾಗುತ್ತದೆ. ಒಟ್ಟಾರೆ ಮೂರನೇ ಒಂದು ಭಾಗದಷ್ಟು ಸೀಟುಗಳಿಗೆ ಮಾತ್ರ ಟಿಕೆಟ್‌ ನೀಡಬೇಕು. ಪ್ರತಿ ಪ್ರದರ್ಶನ ಮುಗಿದ ಬಳಿಕ ಸಿನೇಮಾ ಮಂದಿರವನ್ನು ಸ್ಯಾನಿಟೈಸ್‌ ಮಾಡಬೇಕು ಇತ್ಯಾದಿ ನಿಯಮಗಳು ಜಾರಿಗೆ ಬರಲಿವೆ.

Previous articleಮರಳಿ ಕಾಂಗ್ರೆಸ್‌ ಅಧ್ಯಕ್ಷನಾಗುವುದಿಲ್ಲವಂತೆ ರಾಹುಲ್‌ ಗಾಂಧಿ
Next articleನೆರೆ ನೀರಿನಿಂದ ರಕ್ಷಿಸಲು 2400 ವರ್ಷ ಹಿಂದಿನ ಮಮ್ಮಿ ಬಾಕ್ಸ್‌ ನಿಂದ ಹೊರಕ್ಕೆ

LEAVE A REPLY

Please enter your comment!
Please enter your name here