ಮರಳಿ ಕಾಂಗ್ರೆಸ್‌ ಅಧ್ಯಕ್ಷನಾಗುವುದಿಲ್ಲವಂತೆ ರಾಹುಲ್‌ ಗಾಂಧಿ

ದಿಲ್ಲಿ,ಆ. 19: ತನಗೆ ಮತ್ತೆ ಕಾಂಗ್ರೆಸ್‌ ಅಧ್ಯಕ್ಷನಾಗಲು ಆಸಕ್ತಿಯಿಲ್ಲ ಎಂದು ರಾಹುಲ್‌ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಕಾಂಗ್ರೆಸ್‌ ಅಧ್ಯಕ್ಷನಾಗದೆಯೂ ಪಕ್ಷವನ್ನು ಬಲಪಡಿಸಬಹುದು. ಗಾಂಧಿ ಪರಿವಾರದ ಹೊರಗಿನವರೊಬ್ಬರು ಕಾಂಗ್ರೆಸ್‌ ಅಧ್ಯಕ್ಷರಾಗುವುದಕ್ಕೆ  ನಾನು ಅಡ್ಡಿಯಾಗಿಲ್ಲ ಎಂದು ರಾಹುಲ್‌ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸಹೋದರಿ ಪ್ರಿಯಾಂಕ ಗಾಂಧಿಯವರು ರಾಹುಲ್‌ ಗಾಂಧಿಯ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ಪ್ರದೀಪ್‌ ಛಿಬ್ಬರ್‌ ಮತ್ತು ಹರ್ಷ ಶಾ ಎಂಬ ಅಮೆರಿಕ ಮೂಲದ ಲೇಖಕರು ಪುಸ್ತಕವೊಂದಕ್ಕಾಗಿ ರಾಹುಲ್‌ ಗಾಂಧಿಯ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮರಳಿ ಅಧ್ಯಕ್ಟರಾಗುವ ವಿಚಾರ ಪ್ರಸ್ತಾಪವಾದಾಗ ಸದ್ಯಕ್ಕೆ ನನ್ನಲ್ಲಿ ಆ  ಆಲೋಚನೆಯಿಲ್ಲ. ಪಕ್ಷದಲ್ಲಿ ವಿಶ್ವಾಸಾರ್ಹತೆಯ ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ ನಾನು 2019ರ ಲೋಕಸಭಾ ಸೋಲಿನ ಬಳಿಕ ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ.

ನಾನಿರುವುದು ಕಾಂಗ್ರೆಸ್‌  ಪಕ್ಷಕ್ಕಾಗಿ ಮತ್ತು ಅದಕ್ಕಾಗಿ ಹೋರಾಡಲು ಯಾವಾಗಲೂ ಸಿದ್ಧವಾಗಿದ್ದೇನೆ. ಪಕ್ಷವನ್ನು ಬಲಪಡಿಸಲು ನಾನು ಅಧ್ಯಕ್ಷನೇ ಆಗಬೇಕಾಗಿಲ್ಲ ಎನ್ನು ಮೂಲಕ ಸದ್ಯೋಭವಿಷ್ಯದಲ್ಲಿ ಮರಳಿ ಪಕ್ಷದ ಚುಕ್ಕಾಣಿ ಹಿಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 















































































error: Content is protected !!
Scroll to Top