ಸ್ವಾತಂತ್ರ್ಯೋತ್ಸವ ಅಂಗವಾಗಿ ರೋಟರಿ ಕ್ಲಬ್‌ ವತಿಯಿಂದ ವಿವಿಧ ಸ್ಪರ್ಧೆ

ಕಾರ್ಕಳ : ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ರೋಟರಿ ಕ್ಲಬ್ ಕಾರ್ಕಳ, ರೋಟರಿ ಆನ್ಸ್ ಕ್ಲಬ್, ರೋಟರಾಕ್ಟ್ ಕ್ಲಬ್ ಇವುಗಳ ಆಶ್ರಯದಲ್ಲಿ ವಿಭಿನ್ನ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆ. 15ರಂದು ಸ್ಪರ್ಧೆಗಳು ಆರಂಭಗೊಳ್ಳಲಿದ್ದು, 5 ವರ್ಷದವರೆಗಿನ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ (ಸ್ವಾತಂತ್ರ್ಯ ಹೋರಾಟಗಾರರ ಕುರಿತು), 1ರಿಂದ 4ನೇ ತರಗತಿವರೆಗಿನ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ (2 ನಿಮಿಷ ಮೀರದಂತಿರಲಿ), 5ರಿಂದ 7ನೇ ತರಗತಿಯ ಮಕ್ಕಳಿಗಾಗಿ ಭಾಷಣ ಸ್ಪರ್ಧೆ (ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕುರಿತಾಗಿ) 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ಭಾರತಕ್ಕೆ ನನ್ನ ಕೊಡುಗೆ) ಏರ್ಪಡಿಸಲಾಗಿದೆ. ಮಹಿಳೆಯರಿಗಾಗಿ ಭಾರತೀಯ ನಾರಿ ಸಾಂಪ್ರದಾಯಿಕ ಉಡುಪು, ಪುರುಷರಿಗಾಗಿ ಅಭಿನಯ ಛದ್ಮವೇಷ ಸ್ಪರ್ಧೆ (ಒಂದು ನಿಮಿಷ ಮೀರದಂತೆ) ನಡೆಯಲಿದೆ. ಆಸಕ್ತರು ಈ ಕೆಳಗಿನ ಲಿಂಕ್‌ ಅನ್ನು ಒತ್ತಿ ಗ್ರೂಪ್‌ ಸೇರಬಹುದಾಗಿದೆ.

ಛದ್ಮವೇಷ ಸ್ಪರ್ಧೆಗೆ ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ದೇಶಭಕ್ತಿ ಗೀತೆ ಸ್ಪರ್ಧೆಗೆ ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಭಾಷಣ ಸ್ಪರ್ಧೆಗೆ ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ 

ಭಾರತಕ್ಕೆ ನನ್ನ ಕೊಡುಗೆ (ಭಾಷಣ ಸ್ಪರ್ಧೆ) ಸೇರಲಿಚ್ಛಿಸುವವರು ಈ ಲಿಂಕ್‌ ಕ್ಲಿಕ್‌ ಮಾಡಿ

ಭಾರತೀಯ ನಾರಿ ಸಾಂಪ್ರದಾಯಿಕ ಉಡುಪು ಸ್ಪರ್ಧೆಗೆ ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಅಭಿನಯ ಛದ್ಮವೇಷ ಸ್ಪರ್ಧೆಗೆ ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

error: Content is protected !!
Scroll to Top