
ಕಾರ್ಕಳ : ಗ್ರಂಥಾಲಯ ಶೈಕ್ಷಣಿಕ ಸಂಸ್ಥೆಗಳ ಆತ್ಮ, ಗ್ರಂಥಾಲಯಗಳು ನೀಡುವ ಪ್ರತಿಯೊಂದು ಸೇವೆಗಳೂ ಅತ್ಯುತ್ತಮ ನಾಗರಿಕ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗುವುದು ಎಂದು ಕಾರ್ಕಳ ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀ ವರ್ಮ ಅಜ್ರಿ ಅಭಿಪ್ರಾಯಪಟ್ಟರು.
ಅವರು ಆ. 12ರಂದು ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಭಾರತದ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ| ಎಸ್ ಆರ್. ರಂಗನಾಥನ್ ರವರ 128 ನೇ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯಲ್ಲಿ ಮಾತನಾಡಿದರು. ಕಾಲೇಜಿನ ಗ್ರಂಥಪಾಲಕ ವೆಂಕಟೇಶ್ ನೂತನವಾಗಿ ಚಾಲನೆಗೊಂಡ ಆನ್ ಲೈನ್ ರೆಫರೆನ್ಸ್ ಸರ್ವಿಸ್ ಬಗ್ಗೆ ಮಾಹಿತಿ ನೀಡಿದರು. ಸ್ನಾತಕೋತ್ತರ ವಿಭಾಗದ ಸಂಚಾಲಕ ಪ್ರೊ. ವಿದ್ಯಾಧರ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಐಕ್ಯುಎಸಿ ಹಾಗೂ ನ್ಯಾಕ್ ಸಮಿತಿ ಸಂಚಾಲಕ ಜ್ಯೋತಿ ಎಲ್. ಜನ್ನೆ ವಂದಿಸಿದರು.