ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮಕ್ಕಳಿಲ್ಲ

ಬೆಂಗಳೂರು, ಆ. 12: ಈ ಬಾರಿ ಮಕ್ಕಳಿಗೆ ಸ್ವಾತಂತ್ರ್ಯವಿಲ್ಲ. ಕೊರೊನಾ ಕಾರಣದಿಂದ ಶಾಲೆಗಳು ಇನ್ನೂ ಪ್ರಾರಂಭವಾಗದಿರುವುದರಿಂದ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗುವ ಅವಕಾಶ ಕೈತಪ್ಪಿದೆ.

ಈ ಸಲ ಸ್ವಾತಂತ್ರ್ಯೋತ್ಸವದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಮಂಡಳಿಯವರ ಉಪಸ್ಥಿತಿಯಲ್ಲಿ ಆಯಾಯ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮಾತ್ರ  ಭಾಗವಹಿಸಿ ಕಡ್ಡಾಯವಾಗಿ ಸ್ವಾತಂತ್ರ್ಯೋತ್ಸವ  ಆಚರಿಸಬೇಕು. ಸ್ಥಳೀಯರು ಸ್ವಯಂ ಆಸಕ್ತಿಯಿಂದ ಭಾಗವಹಿಸುವುದಾದರೆ ಕೊರೊನಾ ನಿಯಮಗಳನ್ನು ಪಾಲಿಸಬೇಕೆಂದು  ಸರಕಾರ ಆದೇಶ ಹೊರಡಿಸಿದೆ. ಮಕ್ಕಳು ಭಾಗವಹಿಸಬೇಕೆ ಬೇಡವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿಲ್ಲ. ಹೀಗಾಗಿ ಮಕ್ಕಳು ಸ್ವಾತಂತ್ರ್ಯೋತ್ಸವಕ್ಕಾಗಿ ಶಾಲೆಗೆ ಬರುವ ಸಾಧ್ಯತೆಯಿಲ್ಲ.

ಶಿಕ್ಷಕರು ಸಾಮಾಜಿಕ ಅಂತರವೂ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನು   ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಿಸಬೇಕೆಂದು ಸರಕಾರ ಹೇಳಿದೆ.error: Content is protected !!
Scroll to Top