
ದಿಲ್ಲಿ, ಆ. 12: ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಗೆ ಕೇರಳ ಸರಕಾರ 1.3 ಕೋ.ರೂ. ಹೆಚ್ಚುವರಿ ಪರಿಹಾರ ನೀಡುವುದರೊಂದಿಗೆ ಎರಡು ದಶಕಗಳ ಹಿಂದಿನ ಇಸ್ರೊ ಗೂಢಚಾರಿಕೆ ಪ್ರಕರಣ ಬಹುತೇಕ ಮಕ್ತಾಯವಾದಂತಾಯಿತು. ಇಸ್ರೊದ ರಹಸ್ಯಗಳನ್ನು ಅನ್ಯರಿಗೆ ಹಸ್ತಾಂತರಿಸಿದ್ದ ಸುಳ್ಳು ಆರೋಪಲ್ಲಿ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದ ನಂಬಿ ನಾರಾಯಣನ್ ತನಗಾದ ಅನ್ಯಾಯದ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದರು.
ಈ ಹಿಂದೆ ಕೇರಳ ಸರ್ಕಾರ ಅವರಿಗೆ 60 ಲ. ರೂ.ಗಳನ್ನು ಪರಿಹಾರವಾಗಿ ನೀಡಿತ್ತು. ಈ ಅಲ್ಪ ಮೊತ್ತದ ಪರಿಹಾರದ ವಿರುದ್ಧ ನಂಬಿ ನಾರಾಯಣನ್ ಮತ್ತೆ ಕಾನೂನು ಹೋರಾಟ ಮಾಡಿದ್ದರು.