
ಹೆಬ್ರಿ : ನೂತನ ತಾಲೂಕು ಪಂಚಾಯತ್ ಆಗಿ ರಚನೆಗೊಂಡಿರುವ ಹೆಬ್ರಿ ತಾ.ಪಂ. ನ ಪ್ರಥಮ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಆಯ್ಕೆಗೊಂಡಿರುತ್ತಾರೆ. ಮುದ್ರಾಡಿ ತಾ.ಪಂ. ಕ್ಷೇತ್ರದ ಸದಸ್ಯ, ಕಾರ್ಕಳ ತಾ.ಪಂ.ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ರಮೇಶ್ ಪೂಜಾರಿ ಅವರು ಆ. 12ರಂದು ಹೆಬ್ರಿ ತಾ.ಪಂ.ನ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬೆಳ್ವೆ ಮಡಾಮಕ್ಕಿ ತಾ.ಪಂ. ಕ್ಷೇತ್ರದ ಸದಸ್ಯ ಚಂದ್ರಶೇಖರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಕಾರ್ಕಳ ತಾ.ಪಂ.ನ ಸದಸ್ಯರಾಗಿದ್ದ ರಮೇಶ್ ಪೂಜಾರಿ (ಮುದ್ರಾಡಿ) ಅಮೃತ್ ಕುಮಾರ್ ಶೆಟ್ಟಿ (ಚಾರ), ಲಕ್ಷ್ಮೀ ದಯಾನಂದ (ನಾಡ್ಪಾಲು), ಸುಲತಾ ನಾಯಕ್ (ವರಂಗಾ), ಚಂದ್ರಶೇಖರ್ ಆರ್. ಶೆಟ್ಟಿ (ಹೆಬ್ರಿ) ಹಾಲಾಡಿ ಕ್ಷೇತ್ರದ ಚಂದ್ರಶೇಖರ್ ಶೆಟ್ಟಿ (ಬೆಳ್ವೆ) ಸೇರಿ 6 ಮಂದಿ ನೂತನ ತಾ.ಪಂ. ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.