
ಸುಳ್ಯ, ಆ. 9: ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ(ರಿ.) ರಂಗ ನಿರ್ದೇಶಕ ಜೀವಮ್ ರಾಂ ಸುಳ್ಯ ಅವರ ತಾಯಿ ವನಜಾಕ್ಷಿ ಜಯರಾಮ ಅವರ ನೆನಪಿನಲ್ಲಿ ನೀಡುವ ಈ ಸಾಲಿನ ಪ್ರತಿಷ್ಠಿತ ವನಜ ರಂಗಮನೆ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಆಯ್ಕೆಯಾಗಿದ್ದಾರೆ.
ಶಾಸ್ತ್ರಿಯವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆಯಲ್ಲಿ ವಾಸವಿದ್ದು, ಅವರ ಮನೆಯಲ್ಲಿಯೇ ಆ.28ರಂದು ಪ್ರಶಸ್ತಿ ಪ್ರದಾನಿಸಲಾಗುವುದು. ಈ ಪ್ರಶಸ್ತಿ ಯಕ್ಷ ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರವನ್ನು ಹೊಂದಿದೆ.
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ತಾಳಮದ್ದಳೆಯ ಪಂಡಿತ ಪರಂಪರೆಯ ಹಿರಿಯ ಅರ್ಥದಾರಿಗಳು. ನಿವೃತ್ತ ಮುಖ್ಯೋಪಾಧ್ಯಯರಾಗಿರುವ ಅವರ ಹೆಸರು ತಾಳಮದ್ದಳೆ ಕ್ಷೇತ್ರದಲ್ಲಿ ಮೇರುಮಟ್ಟದಲ್ಲಿದೆ.