ಎಂದು ಪರಿಹಾರ ಕಂಡೀತು ಮೂಲಗೇಣಿದಾರರ ಮೂಲಭೂತ ಸಮಸ್ಯೆ?

0
ಸಾಂದರ್ಭಿಕ ಚಿತ್ರ

ಮೂಲಗೇಣಿ ಎಂಬ ಭೂ ಒಡೆತನದ ಸಮಸ್ಯೆ ಬಹು ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನದ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವ ಒಂದು ಜ್ವಲಂತ ಸಮಸ್ಯೆ.

ಮೂಲಗೇಣಿ ಸಮಸ್ಯೆಗೆ ಶತಮಾನಗಳ ಇತಿಹಾಸವಿದೆ.ಇದು ಸ್ವಾತಂತ್ರ್ಯ ಪೂವ೯ದಿಂದಲೂ ಭೂಮಿ ಅನುಭೋಗಿಸುವ ಕಾನೂನಾತ್ಮಕ ಸಮಸ್ಯೆಯಾಗಿ ಮುಂದುವರಿದುಕೊಂಡು ಬಂದಿರುವುದು ನಮ್ಮನಾಳಿಕೊಂಡು ಬಂದ ಸರಕಾರಗಳಿಗೆ ಭೂಮಿಯ ಸದ್ಬಳಕೆ ಕುರಿತು ಎಷ್ಟು  ಕಾಳಜಿ ಇದೆ   ಎನ್ನುವುದಕ್ಕೊಂದು  ನಿದರ್ಶನ.

ಬ್ರಿಟಿಷ್ ಆಡಳಿತ ಕಾಲದಲ್ಲಿ ಅದೆಷ್ಟೊ ಭೂಮಿಯ ತೀವೆ೯ ವಸೂಲಿ ಮಾಡುವ ಅಧಿಕಾರವನ್ನು ಸ್ಥಳೀಯ ಯಾಜಮಾನಿಕೆಗೆ ಶ್ರೀಮಂತರಿಗೆ ನೀಡಲಾಯಿತು.ಹಾಗಾಗಿ ತೀವೆ೯ ವಸೂಲಿ ಮಾಡಿ ಮೇಲು ಉಸ್ತುವಾರಿ ನೋಡಿಕೊಳ್ಳುವವರು ಪಾರಂಪರಿಕವಾಗಿ ಆ ಭೂಮಿಗೆ ಸಂಬಂಧಿಸಿ ಮೂಲ ಗೇಣಿದಾರರು ಅನ್ನಿಸಿಕೊಂಡರು.ಇದೇ ಭೂಮಿಯನ್ನು ವಾಸ್ತವಿಕವಾಗಿ ಅನುಭವಿಸಿ ಮನೆಮಾರು ಕಟ್ಟಿ ಕೊಂಡು  ತಲೆ ತಲಾಂತರದಿಂದ ಬಂದವರು ಮೂಲಗೇಣಿದಾರರು ಎಂದು ಭೂಮಿಯ ಪ್ರಮಾಣಪತ್ರದಲ್ಲಿ ನಮೂದಿಸಲಾಯಿತು.

ಇಲ್ಲಿನ ಮೂಲಗೇಣಿದಾರರ ಮೂಲ ಸಮಸ್ಯೆ ಅಂದರೆ ಭೂಮಿ ಸ್ವಾಧೀನವಿದೆ.ಸಣ್ಣಪುಟ್ಟ ಮನೆ ಕಟ್ಟಿಕೊಂಡಿದ್ದಾರೆ.ಆದರೆ ಅದರ ಮೇಲೆ ಸಂಪೂಣ೯ ಒಡೆತನವಿಲ್ಲದ ಕಾರಣ ಸಣ್ಣಪುಟ್ಟ ಅಂಗಡಿ ಮಾಡಿ ಜಾಗವನ್ನು ಅಭಿವೃದ್ಧಿ ಪಡಿಸಲು ಬ್ಯಾಂಕಿನಿಂದ ಸಾಲ ಅಥವಾ ಮಾರುವ ಹಕ್ಕು ಪೂತಿ೯ಯಾಗಿ ಮೂಲಗೇಣಿದಾರನಿಗೆ ಇಲ್ಲ. ಇದರಿಂದಾಗಿ ಈ ಉಭಯ ಜಿಲ್ಲೆಯಲ್ಲಿರುವ ನೂರಾರು ಎಕರೆ ಭೂಮಿ ನಿರುಪಯುಕ್ತವಾಗುತ್ತಿದೆ ಮಾತ್ರವಲ್ಲ ಮೂಲಗೇಣಿದಾರರು ತ್ರಿಶಂಕು ಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇದರಿಂದಾಗಿ ಈ ಭೂಮಿ ಇತ್ತ ಮೂಲಿದಾರನಿಗೂ ಪ್ರಯೋಜನವಿಲ್ಲ ಅತ್ತ ಸರಕಾರಕ್ಕೂ  ಪ್ರಯೋಜನವಿಲ್ಲದಂತಾಗಿದೆ.

ಈ ನಿಟ್ಟಿನಲ್ಲಿ ಮೂಲಗೇಣಿದಾರರು ಹಲವು ವಷ೯ಗಳಿಂದ ಕಾನೂನಾತ್ಮಕ ಹೋರಾಟ ಮಾಡಿಕೊಂಡು ಬಂದು ಕೋಟಿ೯ನ ಮಾಗ೯ದಶ೯ನದಂತೆ ಒಂದು ನ್ಯಾಯಯುತ ಪರಿಹಾರವನ್ನು ಮೂಲಿದಾರನಿಗೆ ನೀಡಿ ಇದರ ಸಂಪೂರ್ಣ ಒಡೆತನವನ್ನು ಮೂಲಗೇಣಿದಾರರಿಗೆ ನೀಡ ಬೇಕು ಎಂಬ ತೀಮಾ೯ನದ ಜೊತೆಗೆ ರಾಷ್ಟ್ರಪತಿಗಳ ಅಂಕಿತವೂ ಬಿತ್ತು.ಕೊನೆಗೂ ಕರ್ನಾಟಕದ ರಾಜ್ಯ ಪತ್ರದಲ್ಲೂ ಪ್ರಕಟವಾಯಿತು.

ಇನ್ನೇನು ಸರಕಾರ ಕಾನೂನು ಅನುಷ್ಠಾನಗೊಳಿಸುತ್ತದೆ ಅನ್ನುವಾಗ ಕೆಲವೊಂದು ಸ್ವ ಹಿತಾಸಕ್ತಿ ಮೂಲಿದಾರರು ತಮಗೆ ನೀಡುವ ಪರಿಹಾರದ ಪ್ರಮಾಣ ಹೆಚ್ಚು ಮಾಡಬೇಕು ಎಂದು ತಕರಾರು ಎತ್ತಿ ಕೋರ್ಟ್‌  ಮೆಟ್ಟಿಲು ಹತ್ತಿದ ಸಂದಭ೯ ಬಂತು.

ಒಂದು ವೇಳೆ ಸರಕಾರ ತಾನಾಗಿಯೇ ಮುಂದೆ ಬಂದು ಒಂದು ಸ್ವಯಂ ನಿಣ೯ಯ ತೆಗೆದುಕೊಂಡಿದ್ರೆ ಈ ಸಮಸ್ಯೆಗೆ ಒಂದು ತಾಕಿ೯ಕ ಪೂಣ೯ವಿರಾಮವಿಡಬಹುದಿತ್ತು.ಆದರೆ ಸರಕಾರ ಕೂಡಾ ನಿಲ೯ಕ್ಷ ಧೋರಣೆ ತೋರುವುತ್ತಿರುವುದು ಅತ್ಯಂತ ಬೇಸರದ ವಿಚಾರ.

ಈಗಾಗಲೇ ರಾಜ್ಯ  ಸರಕಾರ ಕೃಷಿ ಭೂಮಿಗೆ ಸಂಬಂಧ ಪಟ್ಟ ಸಮಸ್ಯಗಳನ್ನು ನಿವಾರಿಸುವ ಸಲುವಾಗಿ  ತೀವ್ರ ವಿರೋಧದ ನಡುವೆಯೂ ಸುಗ್ರೀವಾಜ್ಞೆ ತರುವ ಮೂಲಕ ಅಕ್ರಮ ಕಾನೂನು ಗಳನ್ನು ಸಕ್ರಮಗೊಳಿಸಿದೆ.ಮೂಲಗೇಣಿದಾರರ ಸಕ್ರಮ ಕಾನೂನು ನನ್ನನ್ನು ಸಕ್ರಮಗೊಳಿಸುವುದರಲ್ಲಿ ಮೀನಾವೇಷ ಎಣಿಸುವುತ್ತಿರುವುದಾದರೂ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ.

ರಾಜಕೀಯ ಲೆಕ್ಕಾಚಾರ ಬದಿಗಿಟ್ಟು ಕರಾವಳಿ ಜಿಲ್ಲಾ ಮೂಲಗೇಣಿದಾರರ ಕಿತ್ತು ತಿನ್ನುವ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಸೂಚಿಸುವಲ್ಲಿ ಸರಕಾರ ಮುಂದಾಗಲಿ ಎನ್ನುವುದು ಸಾವಿರಾರು ಬಡ ಮಧ್ಯಮ ವಗ೯ದ ಮೂಲಗೇಣಿದಾರರ ಕಳಕಳಿಯ ನಿವೇದನೆಯೂ ಹೌದು.

ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

Previous articleಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗಳಿಗೆ 1049 ಕೋ.ರೂ. ಜಮೆ: ಯಡಿಯೂರಪ್ಪ
Next articleಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ರಂಗಮನೆ ಪ್ರಶಸ್ತಿ

LEAVE A REPLY

Please enter your comment!
Please enter your name here