ಕಾರ್ಕಳ : ಎಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್, ಲಯನ್ಸ್ ಕ್ಲಬ್ ನೀರೆ ಬೈಲೂರು ಇವರ ಸಹಯೋಗದಲ್ಲಿ ಜೂ. 17ರಂದು ಕೌಡೂರು ಹೊಸಬೆಳಕು ಆಶ್ರಮದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ನಡೆಯಲಿದೆ.
ಕಣ್ಣು, ಚರ್ಮ, ಸ್ತ್ರೀ ರೋಗ ತಪಾಸಣೆ, ದಂತ ಪರೀಕ್ಷೆ, ಸಾಮಾನ್ಯ ಔಷಧ, ಇಸಿಜಿ, ಶುಗರ್, ಬಿ.ಪಿ ತಪಾಸಣೆ ಹಾಗೂ ಉಚಿತವಾಗಿ ಸಮೀಪದ ದೃಷ್ಠಿ ಕನ್ನಡಕಗಳನ್ನು ನೀಡಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆಗೆ ಬರುವ ಎಲ್ಲರಿಗೂ ಉಚಿತವಾಗಿ ಶಸ್ತ್ರಚಿಕಿತ್ಸೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ್ ಶೆಟ್ಟಿ (8105825346) ಅವರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















