ದಿಲ್ಲಿ, ಆ.2: ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಆ.5 ರಂದು ಅಯೋಧ್ಯೆಯಲ್ಲಿನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ , ಇಲ್ಲವಾ ಎಂಬ ಅನುಮಾನ ನಿವಾರಣೆಯಾಗಿದೆ.
ಈ ಹಿರಿಯರಿಬ್ಬರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ಆದರೆ ಅವರು ಸ್ವತಃ ಅಯೋಧ್ಯೆಗೆ ಹೋಗುವುದಿಲ್ಲ ಬದಲಾಗಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಲಿದ್ದಾರೆ.
ಇದೇ ವೇಳೆ ರಾಮ ಮಂದಿರ ಹೋರಾಟದ ಮುಂಚೂಣಿಯಲ್ಲಿದ್ದ ಈ ಹಿರಿಯರಿಗೆ ಅವರ ಘನತೆ, ಗೌರವ ತಕ್ಕಂತೆ ಆಮಂತ್ರಣ ನೀಡಲಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಉಳಿದವರಿಗೆ ಆಮಂತ್ರಣ ಪತ್ರ ಕಳುಹಿಸಿದ್ದರೆ ಆಡ್ವಾಣಿ ಮತ್ತು ಜೋಶಿಯವರನ್ನು ಬರೀ ಫೋನಿನಲ್ಲಿ ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ.