ಮಂಗಳೂರು,ಆ.2 : ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿʼಸೋಜಾ ಹಾಗೂ ಅವರ ಪತ್ನಿ ಡಾ.ಕವಿತಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಇದ್ದವರಿಗೆ ಆತಂಕ ಶುರುವಾಗಿದೆ.
ಐವನ್ ಡಿʼಸೋಜಾ ಅವರು ಶನಿವಾರ ಬೆಳಗ್ಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಅದರ ವರದಿ ಬಂದದ್ದು ಸಂಜೆ. ಈ ನಡುವೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಆಗಮಿಸಿದಾಗ ಇಡೀ ದಿನ ಅವರ ಜೊತೆಗಿದ್ದರು.
ಸಂಜೆ ಐವನ್ ಡಿʼಸೋಜಾ ಅವರ ವರದಿ ಪೊಸಿಟಿವ್ ಬಂತು. ಹೀಗಾಗಿ ಅವರ ಜೊತೆಗೆ ಒಡನಾಡಿದವರಿಗೆ ಆತಂಕ ಶುರುವಾಗಿದೆ. ಡಿಕೆಶಿಯವರು ಕೊರೊನಾ ಕ್ವಾರಂಟೈನ್ ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆಯೂ ಎದುರಾಗಿದೆ.