ಇತ್ತೀಚೆಗೆ ಕರ್ನಾಟಕ ಸರಕಾರ ಭೂ ಸುಧಾರಣಾ ಕಾಯಿದೆಗೆ ಪ್ರಮುಖವಾದ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ತಯಾರಿ ನಡೆಸಿದೆ. ಈ ಭೂ ಸುಧಾರಣೆಯ ತಿದ್ದುಪಡಿ ಕುರಿತು ಸಾಕಷ್ಟು ಪರ ವಿರೋಧ ಮಾತು ಕೇಳಿ ಬರುತ್ತಿದೆ.
2020ರ ಭೂ ಸುಧಾರಣಾ ತಿದ್ದುಪಡಿಯ ಪ್ರಮುಖ ಅಂಶವೇನು?ಈ ಹಿಂದಿನ ಭೂ ಸುಧಾರಣಾ ನಿಯಮದಂತೆ ರೆೈತರ ಕೃಷಿ ಭೂಮಿಯನ್ನು ರೆೈತರೇ ಖರೀದಿಸಬಹುದು ಹೊರತು ಬೇರೆಯವರಿಗೆ ಅದನ್ನು ಖರೀದಿಸುವ ಹಕ್ಕಿಲ್ಲ.ಈಗಿನ ತಿದ್ದುಪಡಿ ನಿಯಮದಂತೆ ಕೃಷಿಯೇತರರು ಕೂಡಾ ಕೃಷಿ ಭೂಮಿಯನ್ನು ಖರೀದಿಸುವ ಅವಕಾಶ ಪಡೆದುಕೊಳ್ಳುತ್ತಾರೆ.
ಈ ಕಾಯಿದೆ ವಿರೋಧಿಸುವವರ ಪ್ರಮುಖ ವಾದವೆಂದರೆ ಕೃಷಿಕರ ಭೂಮಿ ಶ್ರೀಮಂತ ಉದ್ಯಮಿಗಳ ಪಾಲಾಗುತ್ತದೆ.ಸಣ್ಣ ರೆೈತರ ತುಂಡು ಭೂಮಿಯೂ ಕೂಡಾ ಬಹುರಾಷ್ಟ್ರೀಯ ಉದ್ಯಮಿಗಳ ಪಾಲಾಗಬಹುದು ಎಂಬ ಒಂದು ವಾದ.
ಆದರೆ ಈ ಮೇಲಿನ ವಾದವನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ.ಇನ್ನೊಂದು ರೀತಿಯಲ್ಲಿಈ ತಿದ್ದುಪಡಿ ಕಾನೂನು ರೆೈತರಿಗೆ ವರದಾನವೂ ಹೌದು.ಇದಕ್ಕಿರುವ ಬಲವಾದ ಕಾರಣ
-ಪ್ರತಿಯೊಬ್ಬ ರೆೈತನ ಭೂಮಿಗೂ ಒಂದಿಷ್ಟು ನ್ಯಾಯಯುತ ಬೆಲೆ ನಿಗದಿಯಾಗುವ ಮಾರುಕಟ್ಟೆ ನಿಮಾ೯ಣವಾಗುತ್ತದೆ.
-ಕೃಷಿ ಭೂಮಿಯ ಮೌಲ್ಯ ಜಾಸ್ತಿಯಾಗುವ ಕಾರಣ ಸಾಲ ವಗೆೈರೆ ಜಾಸ್ತಿ ಪ್ರಮಾಣದಲ್ಲಿ ನಿಗದಿಯಾಗುತ್ತದೆ.
-ಕೃಷಿ ಭೂಮಿಯ ಬೆಲೆ ವೃದ್ಧಿಸುವುದರಿಂದ ರೆೈತರ ಆತ್ಮ ಸ್ಥೈಯ೯ ಕೂಡಾ ಇಮ್ಮಡಿ ಯಾಗುತ್ತದೆ. (ಉದಾ: ಮನೆಯಲ್ಲಿ ಒಂದಿಷ್ಟು ಚಿನ್ನ ಇದ್ದ ಹಾಗೇ ಬದುಕಿಗೆ ಭದ್ರತೆ).
-ಈ ಕಾಯಿದೆ ವಿರೋಧಿಸುವವರು ನಿಜವಾದ ರೆೈತರಲ್ಲ.ಅವರು ಹೆಸರಿಗೆ ಮಾತ್ರ ಕೃಷಿಕರು ಎಂಬ ಹಣೆ ಪಟ್ಟಿ ಹೊಂದಿದವರು. ಅವರ ಆದಾಯದ ಮೂಲ ಬೇರೆಯೇ ಇದೆ.
-ಕರ್ನಾಟಕದಲ್ಲಿ ಅದೆಷ್ಟೊ ರಾಜ ಕಾರಣಿಗಳಿದ್ದಾರೆ, ಕೃಷಿಕರ ಹೆಸರಿನಲ್ಲಿ ಸಾವಿರಾರು ಎಕ್ಕರೆ ಕೃಷಿ ಭೂಮಿಯನ್ನು ಅಡ್ಡ ದುಡ್ಡಿಗೆ/ಕಡಿಮೆ ಬೆಲೆಗೆ ಖರೀದಿಸಿ ಹೊರ ಆದಾಯವನ್ನು ಕೃಷಿ ಆದಾಯವನ್ನಾಗಿ ತೋರಿಸಿ ತೆರಿಗೆಯನ್ನು ವಂಚಿಸುವವರು ಸಾಕಷ್ಟು ಮಂದಿ ಇದ್ದಾರೆ.ಇಂದು ಈ ಕಾಯಿದೆ ವಿರೋಧಿಸುವ ವಗ೯ದಲ್ಲಿ ಇವರ ಕೊಡುಗೆ ಸಾಕಷ್ಟು ಇದೆ ಅನ್ನುವುದು ಅಷ್ಟೇ ಸತ್ಯ – ಕೃಷಿ ಭೂಮಿಯ ಮೌಲ್ಯ ಹೆಚ್ಚಾದಾಗ ರೆೈತರಿಗೂ ತಮ್ಮ ಭೂಮಿ, ಕೃಷಿ ಮೇಲಿನ ಒಲವು ಜಾಸ್ತಿಯಾಗ ಬಾರದು ಎಂಬ ನಿಯಮವಿದೆಯೆ? ವಿರೋಧಿಸುವ ಮುನ್ನ 1978ರ ಭೂ ಸುಧಾರಣಾ ಕಾಯಿದೆ ಅನ್ವಯ ಅದೆಷ್ಟೊ ಬಡ ರೆೈತರು ಉಳುವವನೇ ಹೊಲದೊಡೆಯರಾದರು.ಆದರೆ ಅನಂತರ ಅಂತಹ ರೆೈತರ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿದ್ದೇವೆಯೇ? ಆತ್ಮ ವಿಮರ್ಶೆಮಾಡಿಕೊಳ್ಳಬೇಕಾದ ಕಾಲಕೂಡಿ ಬಂದಿದೆ.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ