ರಫೇಲ್‌ -ಸರ್ಕಾರಕ್ಕೆ ರಾಹುಲ್‌ ಪ್ರಶ್ನೆಗಳ ಬಾಣ

0

ದಿಲ್ಲಿ, ಜು. 30: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಭ್ರಞ್ಟಾಚಾರವಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ರಫೇಲ್‌  ಭಾರತಕ್ಕೆ ಬಂದ ಮೇಲೂ  ತನ್ನ ಪಟ್ಟು  ಸಡಿಲಿಸಿಲ್ಲ.

ಬುಧವಾರ  ಹರ್ಯಾಣದ ಅಂಬಾಲ ವಾಯುನೆಲೆಗೆ 5 ರಾಫೆಲ್ ಯುದ್ಧ ವಿಮಾನ ಬಂದಿಳಿದಿವೆ. ಇದಾದ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ಸರ್ಕಾರದ ಮುಂದೆ ಕಳೆದ ಸಾರ್ವತ್ರಿಕ ಚುನಾವಣೆಗೆ ಮೊದಲು ಇಟ್ಟಿದ್ದ ಪ್ರಶ್ನೆಗಳನ್ನು ಪರಿಷ್ಕರಿಸಿ ಕೇಳಿದ್ದಾರೆ.

ಭಾರತೀಯ ವಾಯುಪಡೆಗೆ ರಾಫೆಲ್ ಯುದ್ಧ ವಿಮಾನ ಸೇರಿಸಿದ್ದಕ್ಕೆ ಅಭಿನಂದನೆಗಳು. ಈ ಮಧ್ಯೆ ಕೇಂದ್ರ ಸರ್ಕಾರ ನನ್ನ ಪ್ರಶ್ನೆಗಳಿಗೆ ಉತ್ತರಿಸಬಹುದೇ ಎಂದು ಕೇಳಿ, ಪ್ರತಿ ರಫೇಲ್‌  ಯುದ್ಧ ವಿಮಾನಕ್ಕೆ 526 ಕೋಟಿ ರೂಪಾಯಿಗಳ ಬದಲು 1670 ಕೋಟಿ ರೂಪಾಯಿ  ಏಕಾಗುತ್ತದೆ?, 126 ರಫೇಲ್ ಯುದ್ಧ ವಿಮಾನ ಖರೀದಿಸುವ ಬದಲು ಸರ್ಕಾರ ಏಕೆ 36 ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ ಹಾಗೂ ಹೆಚ್ ಎಎಲ್ ಬದಲಿಗೆ ಬ್ಯಾಂಕಿಗೆ ದಿವಾಳಿ ಎಸಗಿದ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿಗಳ ಗುತ್ತಿಗೆ ಏಕೆ ನೀಡಲಾಗಿದೆ ಎಂದು 3 ಪ್ರಶ್ನೆಗಳನ್ನು ಕೇಳಿದ್ದಾರೆ.

ಫ್ರಾನ್ಸ್ ಜೊತೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸುಪ್ರೀಂ ಕೋರ್ಟ್ ವರೆಗೆ ಹೋಗಿ ಅದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. ಆದರೆ ಒಪ್ಪಂದ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡುತ್ತಲೇ ಬಂದಿದೆ. 

Previous article2001ರ ಭ್ರಷ್ಟಾಚಾರ ಪ್ರಕರಣ : ಜಯಾ ಜೈಟ್ಲಿಗೆ 4 ವರ್ಷ ಜೈಲು
Next articleಮತ್ತೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಚಿಂತನೆ

LEAVE A REPLY

Please enter your comment!
Please enter your name here