Saturday, October 16, 2021
spot_img
Homeದೇಶಶಿಲಾನ್ಯಾಸ ದಿನದಂದೇ ಅಯೋಧ್ಯೆಗೆ ಸಿಗಲಿದೆ 500 ಕೋ.ರೂ. ಯೋಜನೆ

ಶಿಲಾನ್ಯಾಸ ದಿನದಂದೇ ಅಯೋಧ್ಯೆಗೆ ಸಿಗಲಿದೆ 500 ಕೋ.ರೂ. ಯೋಜನೆ

ದಿಲ್ಲಿ :  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ  ಭೂಮಿಪೂಜೆ ನೆರವೇರಿಸುವಂದೇ  500 ಕೋ. ರೂ.  ಯೋಜನೆಗಳನ್ನು ಘೋಷಿಸಲಾಗುವುದು.

ಆ.5ರಂದು ಭೂಮಿಪೂಜೆ ನೆರವೇರಲಿದೆ. ಅಂದೇ ಅಯೋಧ್ಯೆಯಲ್ಲಿ ಕೈಗೊಳ್ಳಲಾಗುವ ಇತರ ಅಭಿವೃದ್ಧಿ ಕಾಮಗಾರಿಗಳ ಯೋಜನೆಗಳನ್ನು ಘೋಷಿಸಿ ಅದೇ ದಿನ 161 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಶಿಲಾನ್ಯಾಸವನ್ನೂ ನೆರವೇರಿಸಲಾಗುತ್ತದೆ. 

326 ಕೋಟಿ ರೂಪಾಯಿ ವೆಚ್ಚದಲ್ಲಿ ಮಂದಿರಕ್ಕೆ ಸಂಬಂಧಪಟ್ಟ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿದರೆ, ಜನತೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಚತುಷ್ಪಥ ಸೇರಿ  161 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಅದೇ ದಿನ ಚಾಲನೆ ಸಿಗಲಿದೆ.

ಅಯೋಧ್ಯೆ ಮೂಲಕ ಹಾದು ಹೋಗುವ ಆಜಂಘಡ್ ಹಾಗೂ ಬಹ್ರೇಚ್ ನಡುವಿನ ರಾಷ್ಟ್ರೀಯ ಹೆದ್ದರಿ 30 ರ 36.7 ಕಿ.ಮೀ ಉದ್ದದ ಚತುಷ್ಪಥದ ಅಗಲೀಕರಣ ಕಾಮಗಾರಿಯನ್ನು 252 ಕೋಟಿ ರೂಪಾಯಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದೇ ವೇಳೆ ಅಯೋಧ್ಯೆಯಲ್ಲಿ 54 ಕೋಟಿ ರೂಪಾಯಿ ವೆಚ್ಚದ ನೀರುಪೂರೈಕೆಯ 3 ನೇ ಹಂತದ ಯೋಜನೆಗೂ ಚಾಲನೆ ನೀಡಲಾಗುತ್ತದೆ.

ಅಯೋಧ್ಯಾ ಶೋಧ್ ಸಂಸ್ಥಾನ್ ಅಡಿಯಲ್ಲಿ 16.8 ಕೋಟಿ ರೂಪಾಯಿ ವೆಚ್ಚದಲ್ಲಿ ತುಳಸಿ ಸ್ಮಾರಕ ಭವನದ ನವೀಕರಣ ಕಾಮಗಾರಿಗೂ ಶಿಲಾನ್ಯಾಸ ನಡೆಯಲಿದ್ದು ಸಂಸ್ಕೃತಿ ಇಲಾಖೆ ಇದನ್ನು ನಿರ್ವಹಿಸಲಿದೆ. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ನಯಾ ಘಾಟ್ ಬಳಿ ಇರುವ ಸರಯೂ ನದಿ ತೀರದಲ್ಲಿ, ರಾಮಾಯಣ ಮೇಳ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು 2.7 ಕೋಟಿ ಮೌಲ್ಯದ ರಾಮ್ ಕಥಾ ಪಾರ್ಕ್ ನ ವಿಸ್ತರಣೆಗೂ ಶಿಲಾನ್ಯಾಸ ಆ.5 ರಂದು ನಡೆಯಲಿದೆ

ಏನೆಲ್ಲಾ ಯೋಜನೆಗಳು?

ಉಪನ್ಯಾಸ ಸಭಾ ಭವನ, ಆಡಳಿತ ಕಚೇರಿ, ಗ್ರಂಥಾಲಯ , ರಾಜ್ ಶ್ರೀ ದಶರಥ್ ರಾಜ್ಯ ವೈದ್ಯಕೀಯ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಬ್ಲಾಕ್, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ 134 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ, ದರ್ಶನ್ ನಗರದಲ್ಲಿ ಪ್ಲಾಸ್ಟಿಕ್ ಸರ್ಜರಿ ಜೊತೆಗೆ ಬರ್ನ್ ಯುನಿಟ್ 2.3 ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ, ರಾಮಾಯಣ ಸರ್ಕ್ಯೂಟ್ ನಲ್ಲಿ ಲಕ್ಷ್ಮಣ್ ಕಿಲಾ ಘಾಟ್-10 ಕೋಟಿ ರೂಪಾಯಿ ವೆಚ್ಚ, 7 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ಈ ಮುಂತಾದ ಯೋಜನೆಗಳು ಅನುಷ್ಠಾನಗೊಳ್ಳಲಿವೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!