ಹೂಸ್ಟನ್: ದಿಢೀರ್ ಬೆಳವಣಿಗೆಯೊಂದರಲ್ಲಿ ಅಮೆರಿಕ ಸರ್ಕಾರ ಹೂಸ್ಟನ್ ನಲ್ಲಿರುವ ಚೀನದ ರಾಯಭಾರ ಕಚೇರಿಯನ್ನು 72 ಗಾಸಿನೊಳಗೆ ಮುಚ್ಚಲು ಆದೇಶಿಸಿದೆ. ಈ ಬೆಳವಣಿಗೆ ಈಗಾಗಲೇ ಹಳಸಿರುವ ಉಭಯ ದೇಶಗಳ ಸಂಬಂಧ ಇನ್ನಷ್ಟು ಬಿಗಡಾಯಿಸುಂತೆ ಮಾಡಲಿದೆ.
ಈ ಆದೇಶ ಹೊರಬಿದ್ದ ಬೆನ್ನಿಗೆ ಚೀನ ರಾಯಭಾರ ಕಚೇರಿಯಲ್ಲಿರುವ ಕಡತಗಳನ್ನು ಸುಟ್ಟು ಹಾಕಲಾಗುತ್ತಿದೆ ಎಂದು ವರದಿಯಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ರಾಯಭಾರ ಕಚೇರಿಯ ಹೊರಗೆ ಅಗ್ನಿಶಾಮಕ ಪತೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ರಾಯಭಾರ ಕಚೇರಿಯನ್ನು ಮುಚ್ಚಲು ಆದೇಶ ನೀಡಿರುವುದನ್ನು ಚೀನದ ಕುಯುನಿಸ್ಟ್ ಪಾರ್ಟಿ ಸರಕಾರದ ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್ ಸಂಪಾದಕ ಹು ಕ್ಸಿಜಿನ್ ಟ್ವೀಟ್ ಮಾಡಿ ದೃಢಪಡಿಸಿದ್ದಾರೆ.
ಇದೊಂದು ಅಭೂತಪೂರ್ವ ನಡೆ.ಇದಕ್ಕೆ ಚೀನ ಇಷ್ಟೇ ಕಠಿಣವಾಗಿ ಪ್ರತಿಕ್ರಿಯೆ ನೀಡಲಿದೆ ಎಂದು ಚೀನದ ವಿದೇಶಾಂಗ ಸಚಿವಾಲಯ ಹೇಳಿದೆ.