ದಿಲ್ಲಿ : ದೇಶದಲ್ಲಿ ಚಿನ್ನ ಸಾರ್ವಕಾಲಿಕ ದಾಖಲೆ ಮಾಡಿದೆ.ಇದೇ ಮೊದಲ ಬಾರಿಗೆ ಚಿನ್ನದ ಬೆಲೆ 10 ಗ್ರಾಂಗೆ 50,000 ರೂ. ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗಿರುವ ಪಲ್ಲಟ ಚಿನ್ನದ ಬೆಲೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. 2019ರ ಅವಧಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಶೇ.20 ಹೆಚ್ಚಳವಾದಂತಾಗಿದೆ.
ದಿಲ್ಲಿಯ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆ 50,000 ರೂ. ದಾಟಿದೆ.
ಆದರೆ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಚಿನ್ನ ಖರೀದಿಯಲ್ಲಿ ಭಾರೀ ಕುಸಿತವಾಗಿದೆ. ಇದೇ ವೇಳಿ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ.ಬುಧವಾರ ಬೆಳ್ಳಿಗೆ ಕೆಜಿಗೆ 60,000 ರೂ.ಆಗಿದೆ.