ಚೀನದಲ್ಲಿ ಪರಿಸ್ಥಿತಿ ಸಹಜತೆಯತ್ತ : ಸಿನೇಮಾ ಮಂದಿರಗಳು ಓಪನ್‌

ಬೀಜಿಂಗ್‌ : ಕೊರೋನಾ ವೈರಸ್ ಗವರು ದೇಶವಾಗಿರುವ ಚೀನದಲ್ಲಿ ಈಗ ಪರಿಸ್ಥಿತಿ ಬಹುತೇಕ ನಿಯಂತ್ರಣಕ್ಕೆ ಬಂದಿದೆ.   ಕೊರೋನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಚಿತ್ರಮಂದಿರಗಳನ್ನು ತೆರೆದು ಸಿನಿಮಾ ಪ್ರದರ್ಶನ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಕಡಿಮೆ ಅಪಾಯದ ವಲಯಗಳೆಂದು ಗುರುತಿಸಿರುವ ಸ್ಥಳಗಳಲ್ಲಿ ಸೋಮವಾರದಿಂದಲೇ ಚಿತ್ರಮಂದಿರಗಳು ಪುನರಾರಂಭವಾಗಿವೆ. ಜನವರಿಯಿಂದ ಚೀನಾದಾದ್ಯಂತ ಎಲ್ಲ ಚಿತ್ರಮಂದಿರಗಳು ಸ್ಥಗಿತಗೊಂಡಿದ್ದವು. ಅಂದಹಾಗೆ, ಚಿತ್ರಮಂದಿರಗಳ ಒಳಗೆ ಶೇ. 30ರಷ್ಟು ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಹಾಗೆಯೇ ಚಿತ್ರಪ್ರದರ್ಶನದ ಸ್ಥಳಗಳನ್ನು ಶೇ. 50ರಷ್ಟು ಇಳಿಸಲಾಗಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ.ಸಿನಿಮಾ ಹಾಲ್‌ ನಲ್ಲಿ ಆಹಾರ ಅಥವಾ ಪಾನೀಯಗಳ ಸೇವನೆಗೆ ಅವಕಾಶ ನೀಡಿಲ್ಲ.

ಆದರೆ ಜಗತ್ತಿನ ಉಳಿದ ದೇಶಗಳು ಇನ್ನೂ ಕೊರೊನಾ ಕಾಟದಿಂದ ಬಳಲುತ್ತಿವೆ.ಅಮೆರಿಕ,ಭಾರತ, ಬ್ರಜಿಲ್‌ ಸೇರಿದಂತೆ ಅನೇಕ ದೇಶಗಳು ಕೊರೊನಾದಿಂದ ಅಕ್ಷರಶಃ ತತ್ತರಿಸುತ್ತಿವೆಔ ದೇಶಗಳಲ್ಲಿ ಯಾವಾಗ ಕೊರೊನಾ ನಿರ್ಮೂಲನೆಯಾಗಿ ಪರಿಸ್ಥಿತಿ ಸಹಜವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ.

error: Content is protected !!
Scroll to Top