ದಿಲ್ಲಿ : ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ಕೆ ಭರದ ಸಿದ್ಧತೆಗಳು ನಡೆಯುತ್ತಿರುವಂತೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯಂ ಸ್ವಾಉಇ ಸರಕಾರದ ಎಉದುರ ದೊಡ್ಡದೊಂದು ಬೇಡಿಕೆ ಇಟ್ಟಿದ್ದಾರೆ. ಭೂಮಿ ಪೂಜೆ ನಡೆಸುವ ಅಯೋಧ್ಯೆ ಹೋರಾಟದ ಮುಂಚೂಣಿಯಲ್ಲಿದ್ದ ಎಲ್.ಕೆ.ಆಡ್ವಾಣಿ, , ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲ ನಾಯಕರ ವಿರುದ್ಧ ದಾಖಲಾಗಿರುವ ವಿವಾದಗ್ರಸ್ತ ಎಟ್ಟಡವನ್ನು ಕೆಡವಿದ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಈ ನಾಯಕರು ಯಾವುದೇ ಮಸೀದಿಯನ್ನು ನೆಲಸಮ ಮಾಡಿಲ್ಲ, ಬದಲಿಗೆ ಅಲ್ಲಿ ಆಗಲೇ ಇದ್ದ ದೇವಾಲಯವನ್ನು ಪುನರ್ನಿರ್ಮಿಸಲು ಅದರ ಭಗ್ನಾವಶೇಷಗಳನ್ನು ಎಸೆದರು ಎಂದು ಸ್ವಾಮಿ ಹೇಳಿದ್ದಾರೆ.
ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಮೊದಲು ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ಬಾಬ್ರಿ ಪ್ರಕರಣದ ಬಗ್ಗೆ ಮತ್ತೊಮ್ಮೆ ದನಿ ಎತ್ತಿದ್ದಾರೆ. ಅಯೋಧ್ಯೆಗೆ ಪ್ರಧಾನಮಂತ್ರಿಯವರು ಲಾಲ್ ಕೃಷ್ಣ ಅಡ್ವಾಣಿ ಮುರಳಿ ಮನೋಹರ ಜೋಶಿ ಮತ್ತು ಇತರ ನಾಯಕರನ್ನು ಕರೆದುಕೊಂಡು ಹೋಗುವ ಮೊದಲು ಅವರ ವಿರುದ್ಧ ನಡೆಯುತ್ತಿರುವ ಮಸೀದಿ ಕೆಡವಿ ಹಾಕಿದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ನಾಯಕರು ಯಾವುದೇ ಮಸೀದಿಯನ್ನು ಹಾನಿಮಾಡಲಿಲ್ಲ. ಆಗಲೇ ಅಲ್ಲಿ ಒಂದು ದೇವಾಲಯವಿತ್ತು ಈ ವಿಷಯವನ್ನು ಸುಪ್ರೀಂ ಕೋರ್ಟ್ ಕೂಡ ಒಪ್ಪಿಕೊಂಡಿದೆ. ಈ ನಾಯಕರು ಈಗಾಗಲೇ ಸ್ಥಾಪಿಸಲಾದ ದೇವಾಲಯವನ್ನು ಪುನರ್ನಿರ್ಮಿಸಲು ಅದರ ಭಗ್ನಾವಶೇಷಗಳನ್ನು ಎಸೆದರು ಎಂದವರು ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ.