ಈ ಮಾಸಾಂತ್ಯದಲ್ಲಿ ವಾಯುಪಡೆಗೆ 5 ರಫೇಲ್‌ ಸೇರ್ಪಡೆ

ದಿಲ್ಲಿ : ಬಹು ನಿರೀಕ್ಷಿತ ರಫೇಲ್‌ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಸೇರ್ಪಡೆಯಾಗುವ ಗಳಿಗೆ ಸನ್ನಿಹಿತವಾಗಿದೆ.  ಜುಲೈ ಕೊನೆಯ ವಾರದಲ್ಲಿ 5   ರಫೇಲ್‌ ಯುದ್ಧ ವಿಮಾನಗಳು  ಭಾರತವನ್ನು ತಲುಪಲಿವೆ. ಜುಲೈ 29ರಂದು ಸರಳ ಸಮಾರಂಭದಲ್ಲಿ ವಾಯುಸೇನೆಯ ಅಂಬಾಲ ವಾಯುನೆಲೆಯಲ್ಲಿ  ಆ ವಿಮಾನಗಳನ್ನು ವಾಯುಪಡೆಗೆ ಸೇರಿಸಿಕೊಳ್ಳಲಾಗುವುದು. ಆಗಸ್ಟ್ 15 ರ ಸುಮಾರಿಗೆ ಇದನ್ನು ವಿಧಿಯುಕ್ತವಾಗಿ ವಾಯುಪಡೆಗೆ ಸೇರಿಸಲಾಗುವುದು. ವಾಯುಪಡೆಯ ಪೈಲಟ್‌ಗಳು ಮತ್ತು ಸಿಬಂದಿಗೆ ರಫೆಲ್ ಫೈಟರ್‌ ನಿರ್ವಹಣೆಯ ದೀರ್ಘ ತರಬೇತಿ ನೀಡಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಇನ್ನಿತರ  ಸೌಲಭ್ಯಗಳು ಇದರಲ್ಲಿವೆ. ವಾಯುಪಡೆ ರಫೇಲ್‌ ಯುದ್ಧ ವಿಮಾನಗಳನ್ನು ಕೂಡಲೇ ಕಾರ್ಯಾಚರಣೆಗೆ ಸಿದ್ಧ ಪಡಿಸಲಿದೆ. ಮೂಲಗಳ ಪ್ರಕಾರ, ಲಡಾಖ್ ಗಡಿಯಲ್ಲಿ ಚೀನ ಆಗಾಗ ತಕರಾರು ತೆಗೆಯುತ್ತಿರುವ ಹಿನ್ನೆಯಲ್ಲಿ‌ ರಫೇಲ್‌ ವಿಮಾನಗಳನ್ನು ಇಲ್ಲಿ ನಿಯೋಜಿಸುವ ಸಾಧ್ಯತೆಗಳಿವೆ.

ಮತ್ತೊಂದೆಡೆ, ಭಾರತ ಮತ್ತು ಅಮುರಿಕ  ನೌಕಾಪಡೆ ಇಂದು ಅಂಡಮಾನ್‌ನಲ್ಲಿ ಸಮರ ಅಭ್ಯಾಸ ನಡೆಸಲಿವೆ.





























































error: Content is protected !!
Scroll to Top