ಮಧ್ಯಪ್ರದೇಶದ ರಾಜ್ಯಪಾಲ ಲಾಲ್ ಜಿ ಟಂಡನ್ ನಿಧನ

ಲಕ್ನೋ: ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಇಂದು ಬೆಳಿಗ್ಗೆ 5: 35 ಕ್ಕೆ ಲಖನೌದ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟಂಡನ್ ಅವರ ಪುತ್ರ ಅಶುತೋಷ್ ನಿಧನದ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ.

ಲಾಲ್ ಜಿ ಟಂಡನ್ ಅವರು ಉಸಿರಾಟದ ಸಮಸ್ಯೆ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು.ಅವರನ್ನು ಕಳೆದ ತಿಂಗಳು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಲಾಲ್ ಜಿ ಟಂಡನ್  ಬಿಜೆಪಿಯ ಪ್ರಬಲ ನಾಯಕರಲ್ಲಿ ಒಬ್ಬರು. ಈ ಹಿಂದೆ ಅವರು ಬಿಹಾರ ರಾಜ್ಯಪಾಲರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತರಲ್ಲಿ ಲಾಲ್ ಜಿ ಟಂಡನ್ ಕೂಡ ಒಬ್ಬರು. ಅಟಲ್ ಜಿ ಸಕ್ರಿಯ ರಾಜಕೀಯದಿಂದ ದೂರವಾದ ನಂತರ, ಲಾಲ್ ಜಿ ಟಂಡನ್ ಲಕ್ನೋ ಸ್ಥಾನದಿಂದ ಸ್ಪರ್ಧಿಸಿದ್ದರು.error: Content is protected !!
Scroll to Top