ಹೆಬ್ರಿ : ಮಹಿಳೆಯಿಂದ ಚಿನ್ನ ಅಡವಿರಿಸಿಕೊಂಡು ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ವಂಚನೆ ಮಾಡಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ಗ್ರಾಮದ ಶೃತಿ ಎಂಬವರು 2025ರ ಫೆ. 23ರಂದು ತಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದುದರಿಂದ ಹೆಬ್ರಿ ಮುತ್ತೂಟ್ ಪೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ ಮಂಜುನಾಥರವರಲ್ಲಿ ತಿಳಿಸಿದಾಗ ಅವರು ನಿಮ್ಮಲ್ಲಿ ಚಿನ್ನ ಇದ್ದರೆ ಕೊಡಿ ತಾನು ಪೈನಾನ್ಸ್‌ನಲ್ಲಿ ಇಟ್ಟು ಹಣ ಕೊಡುವುದಾಗಿ ಹೇಳಿರುತ್ತಾರೆ. ಅದರಂತೆ ಶೃತಿ ಅವರು 3 ಪವನ್ ತೂಕದ ಕನಕ ಮಾಲೆ ಸರ -1, ತಲಾ 4 ಗ್ರಾಮ ತೂಕದ ಕಿವಿಯೋಲೆ ಒಂದು ಜೊತೆ, 1.5 ಗ್ರಾಂ ತೂಕದ ಉಂಗುರ -1, 4 ಪವನ್ ತೂಕದ ಹವಳದ ಸರ -1ನ್ನು ನೀಡಿ ಹಣ ಕೊಡುವಂತೆ ಕೇಳಿದ್ದಾರೆ. ಮಂಜುನಾಥನು 70 ಸಾ. ರೂ. ಹಣವನ್ನು ಶೃತಿ ಅವರ ಬ್ಯಾಂಕ್ ಖಾತೆಗೆ ಹಾಕಿದ್ದು ಉಳಿದ ಹಣವನ್ನು ಖಾತೆಗೆ ಹಾಕುವುದಾಗಿ ಹೇಳಿದ್ದಾರೆ. ಅಲ್ಲದೆ ನಂತರ ಚಿನ್ನವನ್ನು ಬಿಡಿಸಿ ಕೊಡುವುದಾಗಿ 70 ಸಾ. ರೂ. ಹಣವನ್ನು ಗೂಗಲ್ ಪೇ ಮುಖಾಂತರ ಹಾಕಿಸಿಕೊಂಡಿದ್ದು ಇದುವರೆಗೂ ಹಣವನ್ನು ಕೊಡದೆ ಅಥವಾ ಚಿನ್ನವನ್ನೂ ಬಿಡಿಸಿ ಕೊಡದೆ ಮೋಸ ಮಾಡಿದ್ದಾನೆ ಎಂದು ಶೃತಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

































