ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಶನ್‌ ಅಧ್ಯಕ್ಷರಾಗಿ ರಾಕೇಶ್‌ ಅಮೀನ್‌ – ಪ್ರಧಾನ ಕಾರ್ಯದರ್ಶಿಯಾಗಿ ಅನೀಶ್‌ ತೆಂಡೂಲ್ಕರ್‌

ಕಾರ್ಕಳ : ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಶನ್‌ ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ರಾಕೇಶ್‌ ಅಮೀನ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅನೀಶ್‌ ತೆಂಡೂಲ್ಕರ್‌ ಆಯ್ಕೆಯಾಗಿದ್ದಾರೆ. ಆ. 13ರಂದು ಹೋಟೆಲ್‌ ಪ್ರಕಾಶ್‌ನಲ್ಲಿ ನಡೆದ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಜೊತೆ ಕಾರ್ಯದರ್ಶಿಯಾಗಿ ಸುಶಾಂತ್‌ ಶೆಟ್ಟಿ, ಕೋಶಾಧಿಕಾರಿಯಾಗಿ ಸುಕೇಶ್‌, ಸಾಂಸ್ಕೃತಿಕ‌ ಕಾರ್ಯದರ್ಶಿಯಾಗಿ ನಿಖಿಲ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಸಾದ್‌ ಅಂಚನ್‌ ಹಾಗೂ ತಾಂತ್ರಿಕ ಕಾರ್ಯದರ್ಶಿಯಾಗಿ ಮಹೇಶ್‌ ಕುಲಾಲ್‌ ಆಯ್ಕೆಯಾದರು. ಅಸೋಸಿಯೇಶನ್‌ ಅಧ್ಯಕ್ಷ ಪ್ರಕಾಶ್‌ ಆಚಾರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ರಾಕೇಶ್ ಅಮೀನ್‌ ಸ್ವಾಗತಿಸಿದರು.‌ ಕೋಶಾಧಿಕಾರಿ ಸುಕೇಶ್ ಲೆಕ್ಕಪತ್ರ ಮಂಡಿಸಿದರು.





























































































































error: Content is protected !!
Scroll to Top