ಆಟಿ ಕಷಾಯದ ಮಹತ್ವ

ಆಟಿ ಅಮಾವಾಸ್ಯೆ ತುಳುನಾಡು ಮತ್ತು ಕರಾವಳಿ ಕರ್ನಾಟಕದ ವಿಶೇಷ ಆಚರಣೆ. ಇದನ್ನು ಆಷಾಢ ಅಮಾವಾಸ್ಯೆ ಎಂದೂ ಕರೆಯುತ್ತಾರೆ.

ಆಟಿ ಅಮಾವಾಸ್ಯೆಯ ದಿನ ಕುಡಿಯುವ ಕಷಾಯವನ್ನು ಪಾಲೆ ಮರ ಅಥವಾ ಹಾಳೆ ಮರದ ತೊಗಟೆಯಿಂದ ತಯಾರಿಸಲಾಗುತ್ತದೆ. ವೈಜ್ಞಾನಿಕ ಹೆಸರು Alstonia Scholaris – ಇದನ್ನು Blackboard tree, Devil tree ಎಂದೂ ಕರೆಯುತ್ತಾರೆ. ತುಳುವಿನಲ್ಲಿ ಇದನ್ನು “ಪಾಲೆ” ಎನ್ನುತ್ತಾರೆ.

ಹೇಗೆ ತಯಾರಿಸುತ್ತಾರೆ?
ಸೂರ್ಯೋದಯಕ್ಕೂ ಮೊದಲು ಬೆತ್ತಲಾಗಿ ಹೋಗಿ ಚೂಪಾದ ಕಲ್ಲಿನಿಂದ ಮರದ ತೊಗಟೆಯನ್ನು ಕೆತ್ತಬೇಕು ಎನ್ನುವ ನಂಬಿಕೆ ಇದೆ. ತೊಗಟೆಯನ್ನು ತಂದು ಕಷಾಯ ಮಾಡಿ, ಅದಕ್ಕೆ ಕರಿ ಮೆಣಸು, ಬೆಳ್ಳುಳ್ಳಿ, ಓಮ ಕಾಳು ಸೇರಿಸುತ್ತಾರೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ಕಷಾಯ ಕುಡಿದ ನಂತರ ಮೆಂತ್ಯ ಗಂಜಿ ಕುಡಿಯುವ ಪದ್ಧತಿಯೂ ಇದೆ. ಕರಾವಳಿಯ ದೇವಸ್ಥಾನಗಳಲ್ಲೂ ಈ ಕಷಾಯ ತಯಾರಿಸಿ ಜನರಿಗೆ ವಿತರಿಸಲಾಗುತ್ತದೆ. ಆಟಿ ತಿಂಗಳಲ್ಲಿ ಭಾರೀ ಮಳೆ ಮತ್ತು ಬಿಸಿಲಿನಿಂದ ರೋಗಗಳು ಹೆಚ್ಚಾಗುತ್ತವೆ. ಹಾಗಾಗಿ ಈ ಕಷಾಯ ಕುಡಿಯುವ ಆಚರಣೆ ಬಂದಿದೆ.

ಪ್ರಮುಖ ಪ್ರಯೋಜನಗಳು
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮುಂದಿನ ಒಂದು ವರ್ಷ ಸಣ್ಣಪುಟ್ಟ ಕಾಯಿಲೆಗಳು ಬಾರದು ಎಂಬ ನಂಬಿಕೆ.
ಶೀತ, ಕೆಮ್ಮು, ಜ್ವರ ದೂರ ಮಾಡುತ್ತದೆ.
ಹೊಟ್ಟೆನೋವು, ಅತಿಸಾರ, ಸಂಧಿವಾತ, ಮಲೇರಿಯಾ, ಸ್ತ್ರೀರೋಗ ಗುಣಪಡಿಸುವ ಶಕ್ತಿ ಇದೆ.
ದೇಹದ ಕಲ್ಮಶ ಹೊರಹಾಕಿ ರೋಗ ನಿರೋಧಕ ಹೆಚ್ಚಿಸುತ್ತದೆ.
ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆ ಗುಣಪಡಿಸುವ ಔಷಧೀಯ ಗುಣವಿದೆ. ಪಾಲೆ ಮರದ ತೊಗಟೆಯಲ್ಲಿ ಆಟಿ ಅಮಾವಾಸ್ಯೆಯ ದಿನ ಔಷಧೀಯ ಗುಣಗಳು ಹೆಚ್ಚಾಗಿ ಇರುತ್ತವೆ ಎಂಬ ನಂಬಿಕೆ ಇದೆ.

ಆಟಿ ತಿಂಗಳಲ್ಲಿ ಮಳೆ ಜಾಸ್ತಿ, ಕ್ರಿಮಿಕೀಟಗಳ ತೊಂದರೆ ಜಾಸ್ತಿ. ರೋಗನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಇದನ್ನು ಕುಡಿಯುತ್ತಾರೆ. ಆಟಿ ನಂತರ ಹಬ್ಬ ಜಾತ್ರೆಗಳು ಬಂದು ರುಚಿಕರ ತಿನಿಸುಗಳು ಜಾಸ್ತಿಯಾಗುತ್ತವೆ. ಹೊಟ್ಟೆ ಸಂಬಂಧಿ ಸಮಸ್ಯೆ ತಡೆಯಲು ಈ ಕಷಾಯ ಕುಡಿಯುತ್ತಾರೆ. ತುಳುವರು ಪ್ರಕೃತಿಯು ನೀಡಿದ ಔಷಧವೇ ಈ ಹಾಲೆ ಮರ ಎಂದು ನಂಬಿದ್ದಾರೆ.

ಆಟಿ ಕಷಾಯ ಕುಡಿದವರಿಗೆ ಒಂದು ವರ್ಷದವರೆಗೆ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಕರಾವಳಿಗರ ಅಚಲ ನಂಬಿಕೆ. ಹಿರಿಯರಿಂದ ಕಿರಿಯರವರೆಗೆ ಎಲ್ಲರಿಗೂ ನೀಡಲಾಗುತ್ತದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.























































error: Content is protected !!
Scroll to Top