ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಆಗಸ್ಟ್ ತಿಂಗಳ ಕಾರ್ಯಕ್ರಮವಾಗಿ ಮುಂಗಾರು ಕವಿಗೋಷ್ಠಿ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ವಿಶೇಷ ಅತಿಥಿಯಾಗಿ ಗಂಗಾಧರ ಫಣಿಯೂರು ಭಾಗವಹಿಸಿದ್ದರು. ಸದಸ್ಯೆಯರಾದ ಅನುಪಮಾ ಚಿಪ್ಳೂಂಕರ್, ಮಾಲತಿ ವಿ. ರಾಜ್, ಮಿತ್ರಪ್ರಭಾ ಹೆಗ್ಡೆ, ರಾಧಿಕಾ ಶೆಣೈ, ಶುಭಲಕ್ಷ್ಮಿ ನಾಯಕ್, ವಸುಧಾ ಶೆಣೈ, ಡಾ.ಸುಮತಿ, ಗೀತಾ ಮರಾಠೆ, ಸುಲೋಚನಾ ಬಿ.ವಿ., ಶೈಲಜಾ ಹೆಗ್ಡೆ, ರೂಪಾ ಚಿಪ್ಳುಳೂಂಕರ್ ಮುಂಗಾರಿನ ವೈಭವವನ್ನು ಬಣ್ಣಿಸುವ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷೆ ಶ್ಯಾಮಲಾ ಗೋಪೀನಾಥ್ ಮಾತನಾಡಿ, ನೋಡುವ ಕಣ್ಣು, ವಿಹರಿಸುವ ಕಲ್ಪನಾ ಶಕ್ತಿ, ಶಬ್ದ ಲಾಲಿತ್ಯ ಹಾಗೂ ಒಳನೋಟಗಳು ಒಳ್ಳೆಯ ಕವನವನ್ನು ಹುಟ್ಟು ಹಾಕುತ್ತವೆ ಎಂದು ಹೇಳಿದರು. ಗೀತಾ ಮರಾಠೆ ಪ್ರಾರ್ಥಿಸಿ, ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೂಪಾ ಚಿಪ್ಳೂಂಕರ್ ವಂದಿಸಿದರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ – ಮುಂಗಾರು ಕವಿಗೋಷ್ಠಿ





































