ಶಾಮಿಯಾನ ಸಂಯೋಜಕರ ಒಕ್ಕೂಟದಿಂದ ಆರ್ಥಿಕ ನೆರವು

ಕಾರ್ಕಳ : ಶಾಮಿಯಾನ ಸಂಯೋಜಕರ ಒಕ್ಕೂಟ ರಿ. ಉಡುಪಿ ಜಿಲ್ಲೆಯಿಂದ ಕೊಡಲ್ಪಡುವ ಆರೋಗ್ಯ ನಿಧಿಯನ್ನು ಬೋಳ ಚಿನ್ನು ಶಾಮಿಯಾನದ ಸತೀಶ್‌ ಶೆಣೈ ಅವರಿಗೆ ಹಾಗೂ ಮರಣ ಸಾಂತ್ವಾನ ನಿಧಿಯನ್ನು ಕಾರ್ಕಳ ವಲಯದ ಶಾಮಿಯಾನ ಸದಸ್ಯರಾಗಿದ್ದ ದಿ. ವಿಜಯ ನಾಯಕ್‌ ಅವರ ಪತ್ನಿ ವಿದ್ಯಾ ಅವರಿಗೆ ನೀಡಲಾಯಿತು. ಒಟ್ಟು 43 ಸಾವಿರ ರೂ. ಚೆಕ್ಕನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭ ಕಾರ್ಕಳ ವಲಯದ ಅಧ್ಯಕ್ಷ ಓಜ್ವಲ್ಡ್‌ ಪಿಂಟೋ, ಉಪಾಧ್ಯಾಕ್ಷ ಶಿವಾಜಿ ರಾವ್‌, ಮಾಜಿ ಅಧ್ಯಕ್ಷ ರಮೇಶ ಮೊಯ್ಲಿ, ವಲಯ ಕಾರ್ಯದರ್ಶಿ ಗುರುಕಿರಣ್‌ ಮೊಯ್ಲಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಕಾರ್ಕಳ ಉಪಸ್ಥಿತರಿದ್ದರು.

















































error: Content is protected !!
Scroll to Top