ಹೊಸಬೆಳಕು ಆಶ್ರಮದಲ್ಲಿ ಆರೋಗ್ಯ ಶಿಬಿರ

ಕಾರ್ಕಳ : ಎಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್, ಲಯನ್ಸ್ ಕ್ಲಬ್ ನೀರೆ ಬೈಲೂರು ಇವರ ಸಹಯೋಗದಲ್ಲಿ ಜೂ. 17ರಂದು ಕೌಡೂರು ಹೊಸಬೆಳಕು ಆಶ್ರಮದಲ್ಲಿ ಉಚಿತವಾಗಿ ವೈದ್ಯಕೀಯ ಆರೋಗ್ಯ ಶಿಬಿರ ನಡೆಯಿತು.

ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್‌ ವಲಯಾಧ್ಯಕ್ಷ ಪ್ರಶಾಂತ್‌ ಶೆಟ್ಟಿ ಗುತ್ತುಮನೆ ಬೈಲೂರು ವಹಿಸಿದ್ದರು. ನೀರೆ ರವೀಂದ್ರ ನಾಯಕ್‌, ಪಂಚಾಯತ್‌ ಮಾಜಿ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಭಾಸ್ಕರ್‌ ಶೆಟ್ಟಿ, ರಾಜೇಶ್‌ ಶೆಟ್ಟಿ ಜಾರ್ಕಳ, ಸುರೇಶ್‌ ಶೆಟ್ಟಿ ಸಾಯಿರಾಂ, ಐವನ್‌ ಮಿರಾಂದ, ಉದಯ್ ಕುಮಾರ್‌ ಹೆಗ್ಡೆ, ದಿಲೀಪ್‌ ಶೆಟ್ಟಿ, ಗುರುಪ್ರಸಾದ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಸದಾನಂದ ಸಾಲಿಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.























error: Content is protected !!
Scroll to Top