ಕಾರ್ಕಳ : ಕಾಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಜೂ. 6ರಂದು ಅನ್ನಪ್ರಾಶನ ಮತ್ತು ತಾಯಂದಿರ ಸಭೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಅವರು ಓಆರ್‌ಎಸ್ ದ್ರಾವಣ ಉಪಯೋಗ, ತಯಾರಿಸುವ ವಿಧಾನ, ಗರ್ಭಿಣಿ ಹಾಗು ಬಾಣಂತಿಯರಿಗೆ ಆರೈಕೆ, ಡೆಂಗ್ಯೂ, ಮಲೇರಿಯ ಮತ್ತು ಇಲಿ ಜ್ವರಗಳ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮ, ಪರಿಸರ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಸುನಂದ ಅನ್ನ ಪ್ರಾಶನ ಮಾಡುವ ಉದ್ದೇಶ ತಿಳಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ಹರಿಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಸಹಾಯಕಿ ಯಶೋದ, ಮಕ್ಕಳು, ಪೋಷಕರು ಮತ್ತು ಗರ್ಭಿಣಿಯರು ಹಾಜರಿದ್ದರು.
ಕಾಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ – ತಾಯಂದಿರ ಸಭೆ











































































