ಕಾರ್ಕಳ : ಕಾಳಿಕಾಂಬಾ ಅಂಗನವಾಡಿ ಕೇಂದ್ರದಲ್ಲಿ ಜೂ. 6ರಂದು ಅನ್ನಪ್ರಾಶನ ಮತ್ತು ತಾಯಂದಿರ ಸಭೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತಾಲೂಕು ಎಲ್.ಎಚ್.ವಿ. ಶಶಿಕಲಾ ಅವರು ಪೌಷ್ಟಿಕ ಆಹಾರ ಸೇವನೆ, ಗರ್ಭಿಣಿ ಹಾಗು ಬಾಣಂತಿಯರ ಆರೈಕೆ ಕುರಿತು ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕಿ ರತಿ ಶೆಟ್ಟಿ ಮಾತನಾಡಿ, ಅಂಗನವಾಡಿಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸ್ಮಿತಾ ಅವರು ಸೊಳ್ಳೆಯಿಂದ ಹರಡುವ ರೋಗಗಳು ಹಾಗೂ ಮುನ್ನೆಚ್ಚರಿಕಾ ಕ್ರಮ ಸೇರಿದಂತೆ ವಿವಿಧ ಆರೋಗ್ಯ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಶಕುಂತಲಾ ಕಾರ್ಯಕ್ರಮ ನಿರ್ವಹಿಸಿದರು.
ಕಾಳಿಕಾಂಬಾ ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ ಮತ್ತು ತಾಯಂದಿರ ಸಭೆ










































































