ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಇರಾನ್ ಜೊತೆಗೆ 21 ಗಂಟೆಗಳ ಕಾಲ ಶಾಂತಿ ಮಾತುಕತೆ ನಡೆದರೂ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂದು ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿ ಇರಾನ್ ಅಮೇರಿಕಾದ ಷರತ್ತುಗಳನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದೆ. ಒಳ್ಳೆಯ ನಂಬಿಕೆಯಿಂದ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ದುರಾದೃಷ್ಟವಶಾತ್ ಅದು ಸಾಧ್ಯವಾಗುತ್ತಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದಲ್ಲ. ಅದನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುವುದಿಲ್ಲ ಎಂಬ ಬದ್ಧತೆಯನ್ನು ಯುಎಸ್ ಬಯಸಿದೆ. ಇರಾನ್ ಪರಮಾಣು ಕಾರ್ಯಕ್ರಮ ಮತ್ತು ಮೊದಲು ಹೊಂದಿದ್ದ ಪರಮಾಣು ಸಂಗ್ರಹವನ್ನು ಈಗಾಗಲೇ ನಾಶಪಡಿಸಿರುತ್ತೇವೆ. ಆದಾಗ್ಯೂ ಇರಾನ್ ಹೆಚ್ಚೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯಿಂದ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ – ಜೆಡಿ ವ್ಯಾನ್ಸ್









































































