ಎ. 20ರವರೆಗೆ ಕಾರ್ಕಳ ಫುಡ್‌ ಬಾಸ್ಕೆಟ್‌ ಬಳಿಯಿಂದ ಭಾರಿ ವಾಹನ ಸಂಚಾರ ನಿಷೇಧ – ಪರ್ಯಾಯ ರಸ್ತೆ ಬಳಸುವಂತೆ ಸೂಚನೆ

​ಉಡುಪಿ : ಆನೆಕೆರೆ ಫುಡ್‌ ಬಾಸ್ಕೆಟ್‌ ಸಮೀಪ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯಾಗಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ. ಭಾರಿ ವಾಹನ ಚಾಲಕರು ಪರ್ಯಾಯ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿ ಸ್ವರೂಪ ಅವರು ಆದೇಶ ಹೊರಡಿಸಿದ್ದಾರೆ. ಎ. 20ರವರೆಗೆ ಈ ನಿರ್ಬಂಧ ಜಾರಿಯಲ್ಲಿದ್ದು, ಕೇವಲ ಬಸ್ ಮತ್ತು ಲಾರಿಗಳ ಸಂಚಾರಕ್ಕೆ ಮಾತ್ರ ಈ ನಿಯಮ ಅನ್ವಯವಾಗಲಿದೆ.

ಪ್ರಸ್ತುತ ರಸ್ತೆ ಕಿರಿದಾಗಿದ್ದು ಭಾರಿ ವಾಹನಗಳ ಸಂಚಾರದಿಂದ ಕಾಮಗಾರಿಗೆ ಅಡ್ಡಿಯಾಗುವ ಹಾಗೂ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಮನವಿ ಮೇರೆಗೆ ಸಂಚಾರ ನಿಷೇಧಿಸಲಾಗಿದೆ.

ಪರ್ಯಾಯ ರಸ್ತೆ
ಈ ರಸ್ತೆ ಮೂಲಕ ಭಾರಿ ವಾಹನ ಸಂಚಾರ ನಿಷೇಧ ಹೇರಿರುವುದರಿಂದ ಮಂಗಳೂರು, ಮೂಡುಬಿದಿರೆ ಹಾಗೂ ಪಡುಬಿದ್ರಿಗೆ ತೆರಳುವ ಭಾರಿ ವಾಹನಗಳು ಕುಂಟಲ್ಪಾಡಿ ರಸ್ತೆಯ ಮೂಲಕ ಸಂಚರಿಸುವಂತೆ ತಿಳಿಸಲಾಗಿದೆ. ಇನ್ನು ಧರ್ಮಸ್ಥಳದ ಕಡೆಗೆ ಸಾಗುವ ವಾಹನಗಳು ಬಾಹುಬಲಿ ಬೆಟ್ಟದ ರಸ್ತೆಯ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.



















error: Content is protected !!
Scroll to Top