ಕಾರ್ಕಳ : ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡಮಾಡುವ ಇನ್ಸ್ಪೈರ್ ಪ್ರಶಸ್ತಿಗೆ ಉಡುಪಿ ಜಿಲ್ಲಾ ಮಟ್ಟದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
8ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಸ್ ನಾಯಕ್, ಮನೀಷ್, ಸ್ವಸ್ತಿಕ್, 9ನೇ ತರಗತಿಯ ಮನೀಷ್ ಮೂಲ್ಯ ಹಾಗೂ 10ನೇ ತರಗತಿಯ ಕೃಷ್ಣ ಪಾಟೀಲ್ ಪ್ರಶಸ್ತಿಗೆ ಆಯ್ಕೆಯಾದವರು. ಮುಂದಿನ ಹಂತದ ಸ್ಪರ್ಧೆಯ ತಯಾರಿಗಾಗಿ ಪ್ರಶಸ್ತಿಯು 10 ಸಾ. ರೂ. ನಗದನ್ನು ಒಳಗೊಂಡಿರುತ್ತದೆ.
ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳಿಗೆ ಇನ್ಸ್ಪೈರ್ ಪ್ರಶಸ್ತಿ





















